
ಹೆಸರು ‘ಲ್ಯಾಂಡ್‍ಲಾರ್ಡ್’; ಆದರೆ ಇದು ಬಡವರ ಕಥೆ
‘ದುನಿಯಾ’ ವಿಜಯ್ ಅಭಿನಯದ ‘ಲ್ಯಾಂಡ್‍ಲಾರ್ಡ್’ ಚಿತ್ರದ ಮೂರನೇ ಹಂತದ ಚಿತ್ರೀಕರಣ ಇದೀಗ ಪ್ರಾರಂಭವಾಗಿದೆ. ನೆಲಮಂಗಲದ ಬಳಿ ಇರುವ ಬರದಿ ಬೆಟ್ಟದಲ್ಲಿ ‘ಲ್ಯಾಂಡ್ ಲಾರ್ಡ್’ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿ ಬೆಟ್ಟದ ಕೆಳಗೆ ಜಾತ್ರೆಯ ಸೆಟ್ ನಿರ್ಮಾಣ ಮಾಡಲಾಗಿದೆ. ಸೋಮವಾರ ಚಿತ್ರೀಕರಣದ ಸ್ಥಳದಲ್ಲೇ ವಿಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ‘ಲ್ಯಾಂಡ್ ಲಾರ್ಡ್’ ಚಿತ್ರದ ಕುರಿತು ಮಾತನಾಡುವ ವಿಜಯ್, ‘ನನಗೆ ಬುದ್ಧಿ ಬಂದಾಗ ನಮ್ಮೂರಲ್ಲಿ ಕರೆಂಟ್ ಇರಲಿಲ್ಲ. ಬುಡ್ಡಿದೀಪದಲ್ಲಿ ನಾವೆಲ್ಲರೂ ಓದಿ ಬೆಳೆದವರು. ಜಾತಿ, ಧರ್ಮ ಭೇದ-ಭಾವ ಇಲ್ಲದೆ ಎಲ್ಲರೂ ಒಟ್ಟಿಗೆ…