
ಲಾಭದಲ್ಲಿ ಶೇ. 30ರಷ್ಟು ಸೈನಿಕರ ನಿಧಿಗೆ; ‘ಕುಲದಲ್ಲಿ ಕೀಳ್ಯಾವುದೋ’ ನಿರ್ಮಾಪಕ ಘೋಷಣೆ
ಚಿತ್ರ ಬಿಡುಗಡೆಯಾಗಿ ಅದರಿಂದ ಬರುವ ಲಾಭದಲ್ಲಿ ಶೇ. 30ರಷ್ಟನ್ನು ಸೈನಿಕರ ಕಲ್ಯಾಣ ನಿಧಿಗೆ ಕೊಡುವುದಾಗಿ ‘ಕುಲದಲ್ಲಿ ಕೀಳ್ಯಾವುದೋ’ ನಿರ್ಮಾಪಕ ಸಂತೋಷ್ ಘೋಷಿಸಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ನಾಯಕನಾಗಿ ನಟಿಸಿರುವ ‘ಕುಲದಲ್ಲಿ ಕೀಳ್ಯಾವುದೋ’ (Kuladali Keelyavudo) ಚಿತ್ರ ಮೇ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣವಾಯಿತು. ನಿವೃತ್ತ ಯೋಧರಾದ ಮಂಜುನಾಥ್, ಜಯರಾಮ್, ದೇವರಾಜ್, ಅಶೋಕ್ ಕುಮಾರ್, ಸತ್ಯಂ, ಮಧುಸೂದನ್, ಶೇಖರ್ ಅವರು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ…