
ಹೊಸ ವರ್ಷಕ್ಕೆ ಹೊಸ ಹೀರೋ: ಚಿತ್ರರಂಗಕ್ಕೆ ಸುದೀಪ್ ಅಕ್ಕನ ಮಗ ಎಂಟ್ರಿ
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್, ‘ಜಿಮ್ಮಿ’ ಎಂಬ ಚಿತ್ರದ ಮೂಲಕ ನಾಯಕನಾಗಿ, ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕಿತ್ತು. ಎರಡು ವರ್ಷಗಳ ಹಿಂದೆಯೇ ‘ಜಿಮ್ಮಿ’ ಚಿತ್ರದ ಘೋಷಣೆಯಾಗುವುದರ ಜೊತೆಗೆ ನಾಯಕನನ್ನು ಪರಿಚಯಿಸುವ ಟೀಸರ್ ಸಹ ಬಿಡುಗಡೆಯಾಗಿತ್ತು. ಆದರೆ, ಅದೇನಾಯಿತೋ ಗೊತ್ತಿಲ್ಲ, ‘ಜಿಮ್‍ಮಿ’ ಶುರುವಾಗಲೇ ಇಲ್ಲ. ಇದೀಗ ಹೊಸ ವರ್ಷಕ್ಕೆ ಸಂಚಿತ್ ಅಭಿನಯದ ಹೊಸ ಚಿತ್ರವೊಂದರ ಘೋಷಣೆಯಾಗಿದೆ. ಸುದೀಪ್ ಅವರ ಪತ್ನಿ ಮತ್ತು ಮಗಳ ಹೆಸರಲ್ಲಿ ಪ್ರಾರಂಭವಾಗಿರುವ ಸುಪ್ರಿಯಾನ್ವಿ ಪ್ರೊಡಕ್ಷನ್ ಮತ್ತು…