
‘Yash ತಾಯಿ ಅನ್ನೋಕ್ಕಿಂತ ಡ್ರೈವರ್ ಹೆಂಡತಿ ಅಂತ ಗುರುತಿಸಿಕೊಳ್ಳೋಕೆ ಇಷ್ಟಪಡ್ತೀನಿ …’
ಯಶ್ (Yash) ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಿಸಿರುವ ‘ಕೊತ್ತಲವಾಡಿ’, ಆಗಸ್ಟ್ 01ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಯಶ್ ತಾಯಿ ನಿರ್ಮಿಸುತ್ತಿರುವ ಚಿತ್ರವಾದ್ದರಿಂದ ಚಿತ್ರದ ಬಗ್ಗೆ ಒಂದಿಷ್ಟು ಕುತೂಹಲ, ನಿರೀಕ್ಷೆ ಇದೆ. ಈಗಾಗಲೇ ಪುಷ್ಪಾ ಅವರು ಚಿತ್ರದ ಕುರಿತು ಸಾಕಷ್ಟು ಮಾತನಾಡಿದ್ದಾರೆ. ಈಗ ಚಿತ್ರದ ಬಿಡುಗಡೆಗೂ ಮೊದಲು ಇನ್ನೊಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ಒಬ್ಬ ಡ್ರೈವರ್ ಹೆಂಡತಿಯಾಗಿ ಒಂದು ಚಿತ್ರ ನಿರ್ಮಾಣ ಮಾಡಿದ್ದೀನಿ ಎಂದು ಹೇಳಿಕೊಳ್ಳುವುದಕ್ಕೆ ಹೆಚ್ಚು ಖುಷಿ ಇದೆ ಎನ್ನುತ್ತಾರೆ ಪುಷ್ಪಾ. ಈ ಕುರಿತು ಮಾತನಾಡಿರುವ ಅವರು, ‘ಈಗಾಗಲೇ…