
ಮೇ 30ಕ್ಕೆ ಕೋಮಲ್ ಅಭಿನಯದ ಚಿತ್ರದ ಬಿಡುಗಡೆ; ಆದರೆ ಇದು ಕನ್ನಡ ಚಿತ್ರವಲ್ಲ
ಚಿತ್ರರಂಗದಿಂದ ಸ್ವಲ್ಪ ಕಾಲ ದೂರವಿದ್ದ ಕೋಮಲ್, ಆ ನಂತರ ಒಂದರಹಿಂದೊಂದು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಸದ್ಯ ಅವರ ಅಕೌಂಟ್ನಲ್ಲಿ ‘ಕೋಣ’, ‘ಕುಟೀರ’, ‘ರೋಲೆಕ್ಸ್’ ಮತ್ತು ‘ಕಾಲಾಯ ನಮಃ’ ಚಿತ್ರಗಳಿದ್ದು, ಅವೆಲ್ಲವೂ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಹೀಗಿರುವಾಗಲೇ, ಅವರು ಸದ್ದಿಲ್ಲದೆ ಒಂದು ತಮಿಳು ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರ ಇದೇ ಮೇ 30ರಂದು ಬಿಡುಗಡೆ ಆಗುತ್ತಿದೆ. ಕೋಮಲ್ ಸುಮಾರು 1 ವರ್ಷದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಳ್ಳುವುದರ ಜೊತೆಗೆ ಫೋಟೋಗಳನ್ನು ಹಂಚಿಕೊಂಡಿದ್ದರು. ಅದೇ ಚಿತ್ರ ಈಗ…