
Dr Vishnuvardhan ಸ್ಮಾರಕ ಅಭಿಮಾನಿಗಳಿಂದಲೇ ಬೆಂಗಳೂರಿನಲ್ಲಿ ; ಸೆ. 18ಕ್ಕೆ ಅಡಿಗಲ್ಲು
ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ. ವಿಷ್ಣುವರ್ಧನ್(Dr Vishnuvardhan) ಅವರ ಪುಣ್ಯಭೂಮಿಯನ್ನು ಇತ್ತೀಚೆಗೆ ತೆರವುಗೊಳಿಸಿದ್ದು ಗೊತ್ತೇ ಇದೆ. ಒಂದು ಕಡೆ ಆ ಜಾಗವನ್ನು ಪುನಃ ಪಡೆಯುವುದಕ್ಕೆ ಹೋರಾಟ ಪ್ರಾರಂಭವಾಗುವುದರ ಜೊತೆಗೆ, ಬೆಂಗಳೂರಿನಲ್ಲಿ ಇನ್ನೊಂದು ಸ್ಮಾರಕ ಮಾಡುವುದಕ್ಕೆ ವಿಷ್ಣುವರ್ಧನ್ ಅಭಿಮಾನಿಗಳು ಮುಂದಾಗಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿ ಗೊಂದಲ ಹೆಚ್ಚಾದಂತೆ ವಿಷ್ಣುವರ್ಧನ್ ಅವರ ಕುಟುಂಬದವರು ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಮೈಸೂರಿನಲ್ಲಿ ಜಾಗ ಪಡೆದು, ಅಲ್ಲಿ ಈಗಾಗಲೇ ಸ್ಮಾರಕ ನಿರ್ಮಾಣ ಮಾಡಿದ್ದಾಗಿದೆ. ವಿಷ್ಣುವರ್ಧನ್ ಅವರ ಸ್ಮಾರಕಕ್ಕಾಗಿ ಮೈಸೂರಿನವಿರಗೂ ಹೋಗುವುದು ಕಷ್ಟ ಎನ್ನುತ್ತಿದ್ದವರಿಗೆ, ಸ್ಮಾರಕಕ್ಕಾಗಿ ಬೆಂಗಳೂರಿನಲ್ಲೇ ಸುದೀಪ್…