
Shivanna 131; ಸೆಟ್ಗೆ ಮರಳಿದ ಶಿವರಾಜ್ಕುಮಾರ್; ಸಂತಸ ಹಂಚಿಕೊಂಡ ನಿರ್ದೇಶಕ ಕಾರ್ತಿಕ್
ಮೂತ್ರಕೋಶದ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡ ಶಿವರಾಜ್ ಕುಮಾರ್ ಚಿತ್ರೀಕರಣಕ್ಕೆ ಮರಳಿದ್ದಾರೆ. ಇನ್ನೂ ಹೆಸರಿಡದ ಶಿವಣ್ಣನ 131 (Shivanna 131) ಚಿತ್ರದ ಸೆಟ್ಗೆ ಹ್ಯಾಟ್ರಿಕ್ ಹೀರೋ ತೆರಳಿದ್ದಾರೆ. ಅನಾರೋಗ್ಯದಲ್ಲಿದ್ದಾಗಲೇ 45 ಸಿನಿಮಾದ ಕೈಮ್ಯಾಕ್ಸ್ನಲ್ಲಿ ನಟಿಸಿದ್ದರು. ಚೇತರಿಸಿಕೊಂಡು ಈಗ ಮತ್ತೆ ಎನರ್ಜಿಟಿಕ್ ಆಗಿ ಮರಳಿದ್ದಾರೆ. 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಣ್ಣ ಮಾತನಾಡುವಾಗ ಅಭಿಮಾನಿಗಳು ಮತ್ತು ಹಿತೈಷಿಗಳ ಅಪಾರ ಬೆಂಬಲಕ್ಕಾಗಿ ಕೃತಜ್ಞತೆ ತಿಳಿಸಿದ್ದರು. ‘ನಿಮ್ಮ ಎಲ್ಲ ಪ್ರಾರ್ಥನೆಗಳು ಮತ್ತು ಶುಭ ಹಾರೈಕೆಗಳು…