
Aviram Kanteerava; ಕನ್ನಡದ ಚಿತ್ರ ಚೀನಿ ಭಾಷೆಗೆ; ಹೊಸ ಹೆಗ್ಗಳಿಕೆಗೆ ಪಾತ್ರವಾದ ‘ಕರಳೆ’
ಕನ್ನಡದ ಚಿತ್ರವೊಂದನ್ನು ಬೇರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುವುದು ಹೊಸ ವಿಷಯವಲ್ಲ. ಆದರೆ, ಕನ್ನಡ ಚಿತ್ರವೊಂದು ಅಂತರಾಷ್ಟ್ರೀಯ ಭಾಷೆಗೆ ಡಬ್ ಆಗಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯೋಗ ಕನ್ನಡದಲ್ಲಾಗುತ್ತಿದೆ. ಈ ಹಿಂದೆ ‘ಕಲಿವೀರ’ ಮತ್ತು ‘ಕನ್ನಡದೇಶದೊಳ್’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಅವಿರಾಮ್ ಕಂಠೀರವ (Aviram Kanteerava), ಇನ್ನೊಂದು ವಿಭಿನ್ನ ಕಥೆ ಇರುವ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದೇ ‘ಕರಳೆ’ (Karale). ಭಾರತದ ಪ್ರಮುಖ ಭಾಷೆ ಕನ್ನಡ ಜೊತೆಗೆ ನೆರೆ ರಾಷ್ಟ್ರ ಚೀನಾದ ಮಾಂಡರೀನ್…