
Watch the Video: ಪುಟ್ಟ ಗೌರಿ ದೊಡ್ಡ ಕನಸಿತ ತಯಾರಿ ಹೇಗಿದೆ ನೋಡಿ..
‘ಪುಟ್ಟ ಗೌರಿ’,’ಕನ್ನಡತಿ’ ಧಾರಾವಾಹಿಗಳಿಂದ ಮನೆಮಾತಾದ ನಟಿ ರಂಜನಿ ರಾಘವನ್ (Ranjani Raghavan). ನಂತರ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಅವರು ನಂತರ ಒಂದು ಕಥಾ ಸಂಕಲನ ಮತ್ತು ಕಾದಂಬರಿ ಬರೆದು ಬರವಣಿಗೆಯಲ್ಲೂ ತೊಡಗಿಕೊಂಡರು. ಕನ್ನಡತಿ ಧಾರಾವಾಹಿಯಲ್ಲಿ ಕನ್ನಡದ ಬಗ್ಗೆ ಪಾಠ ಮಾಡುವ ಮೂಲಕ ಮೆಚ್ಚುಗೆಯನ್ನೂ ಪಡೆದುಕೊಂಡಿದ್ದರು. ಈಗ ಮತ್ತೊಂದು ವೃತ್ತಿಯನ್ನು ಆಯ್ಕೆಮಾಡಿಕೊಂಡಿದ್ದಾರೆ. ಇದು ಸಹ ಬಣ್ಣದ ಬದುಕಿನ ಇನ್ನೊಂದು ಭಾಗ. ಈ ಬಾರಿ ರಂಜಿನಿ ರಾಘವನ್ ತೆರೆಯ ಮುಂದೆ ಕೆಲಸ ಮಾಡುತ್ತಿಲ್ಲ. ತೆರೆಯ ಹಿಂದೆ ಇದ್ದುಕೊಂಡು ನಿರ್ದೇಶನದ…