
Prabhas ಆಯ್ತು, ಈಗ Hrithik Roshan ಅಭಿನಯದಲ್ಲಿ Hombale Films ಚಿತ್ರ ನಿರ್ಮಾಣ
ರಿಷಭ್ ಶೆಟ್ಟಿ (Rishabh Shetty) ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’ ಚಿತ್ರವನ್ನು ಹೊರತುಪಡಿಸಿದರೆ, ಹೊಂಬಾಳೆ ಫಿಲಂಸ್ (Hombale Films) ಯಾವುದೇ ಹೊಸ ಚಿತ್ರವನ್ನು ಶುರು ಮಾಡಿಲ್ಲ. ಪ್ರಭಾಸ್ (Prabhas) ಅಭಿನಯದ ಮೂರು ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿದೆಯಾದರೂ, ಆ ಯಾವುದೇ ಚಿತ್ರಗಳು ಇನ್ನೂ ಶುರುವಾಗಿಲ್ಲ. ಹೀಗಿರುವಾಲೇ, ಹೊಂಬಾಳೆ ಫಿಲಂಸ್ ಸಂಸ್ಥೆಯು ಬಾಲಿವುಡ್ ನಟ ಹೃತಿಕ್ ರೋಶನ್ (Hrithik Roshan) ಅಭಿನಯದಲ್ಲಿ ಪ್ಯಾನ್ ಇಂಡಿಯಾ (Pan India) ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದೆ. ಈ ಸಂಬಂಧ, ಬುಧವಾರ…