
‘ಹೆಜ್ಜೆ ಮೂಡದ ಹಾದಿ’, ‘JUNGLE MANGAL’ ಆದಾಗ …
ನಿರ್ದೇಶಕ ರಕ್ಷಿತ್ ಕುಮಾರ್ ತಮ್ಮ ಚಿತ್ರದ ಟ್ರೇಲರನ್ನು ಯೋಗರಾಜ್ ಭಟ್ಟರಿಗೆ ತೋರಿಸುವುದಕ್ಕೆ ಹೋಗಿದ್ದರಂತೆ. ಟ್ರೇಲರ್ ನೋಡಿದ ಭಟ್ಟರು, ಚಿತ್ರಕ್ಕೆ ಏನು ಹೆಸರಿಟ್ಟಿದ್ದೀರಾ ಎಂದು ಕೇಳಿದ್ದಾರೆ. ಅಲ್ಲಿಯವರೆಗೂ ನಿರ್ದೇಶಕರು ಚಿತ್ರಕ್ಕೆ ‘ಹೆಜ್ಜೆ ಮೂಡದ ಹಾದಿ’ ಎಂದು ಹೆಸರಿಡುವುದಕ್ಕೆ ಯೋಚಿಸಿದ್ದರು. ಭಟ್ಟರು ಹೊಸ ಐಡಿಯಾ ಕೊಟ್ಟಿದ್ದಾರೆ. ‘ಜಂಗಲ್ ಮಂಗಲ್’ (JUNGLE MANGAL) ಎಂದಿಡಿ ಎಂದು ಸಲಹೆ ಕೊಟ್ಟಿದ್ದಾರೆ. ಯಶ್ ಶೆಟ್ಟಿ ಅಭಿನಯದ ‘ಜಂಗಲ್ ಮಂಗಲ್’ ಚಿತ್ರವು ಜುಲೈ 04ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಸಹ್ಯಾದ್ರಿ…