
‘ಸಿದ್ಲಿಂಗು 2’ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ …
ಕಳೆದ ವರ್ಷ ದಸರಾ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು ನಿರ್ದೇಶಕ ವಿಜಯಪ್ರಸಾದ್. ಆದರೆ, ಅವರು ಅಂದುಕೊಂಡಂತೆ ಆಗಲಿಲ್ಲ. ಇದೀಗ ಪ್ರೇಮಿಗಳ ದಿನದಂದು ಸಿದ್ಲಿಂಗು 2’ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದ್ದು, ಇದೀಗ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 12 ವರ್ಷಗಳ ಹಿಂದೆ ‘ಸಿದ್ಲಿಂಗು’ ಚಿತ್ರದ ಮೂಲಕ ನಿರ್ದೇಶಕರಾದವರು ವಿಜಯಪ್ರಸಾದ್. ಈಗ ಆ ಚಿತ್ರದ ಮುಂದುವರೆದ ಭಾಗದೊಂದಿಗೆ ಅವರು ವಾಪಸ್ಸಾಗುತ್ತಿದ್ದಾರೆ. ಯೋಗಿ ಇಲ್ಲೂ ಮುಂದುವರೆಯಲಿದ್ದು, ನಾಯಕಿಯಾಗಿ ಸೋನು ಕಾಣಿಸಿಕೊಂಡಿದ್ದಾರೆ. ಜೊತೆಗೆ ಆ ಚಿತ್ರದಲ್ಲಿ ಅಭಿನಯಿಸಿದ್ದ ಗಿರಿಜಾ…