
‘Daiji’ ಚಿತ್ರಕ್ಕೆ ದಿಗಂತ್ ಎಂಟ್ರಿ; Ramesh Aravind ಸಹೋದರನ ಪಾತ್ರದಲ್ಲಿ ನಟನೆ
ದಿಗಂತ್ ಇತ್ತೀಚಿನ ದಿನಗಳಲ್ಲಿ ನಾಯಕನಾಗಿಯೂ ಅಲ್ಲದೆ, ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಉತ್ತರಕಾಂಡ’, ‘ಲಾಫಿಂಗ್ ಬುದ್ಧ’ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇದೀಗ ರಮೇಶ್ ಅರವಿಂದ್ ಅಭಿನಯದ ‘ದೈಜಿ’ (Daiji) ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ರಮೇಶ್ ಅರವಿಂದ್ (Ramesh Aravind) ಅಭಿನಯದ 106ನೇ ಚಿತ್ರವಾದ ‘ದೈಜಿ’ ಈ ವರ್ಷದ ಆರಂಭದಲ್ಲಿ ಪ್ರಾರಂಭವಾಗಿತ್ತು. ಈ ಚಿತ್ರಕ್ಕೆ ಇದೀಗ ದಿಗಂತ್ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಅವರು ರಮೇಶ್ ಅರವಿಂದ್ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ….