
Brat Tiltle Launch: ಕೃಷ್ಣ ಎಂಬ ‘ಬ್ರ್ಯಾಟ್’; ಪ್ಯಾನ್ ಇಂಡಿಯಾ ಸಿನಿಮಾದೊಂದಿಗೆ ಬಂದ ಶಶಾಂಕ್
‘ಡಾರ್ಲಿಂಗ್’ ಕೃಷ್ಣ (Darling Krishna) ಅಭಿನಯದಲ್ಲಿ ಇನ್ನೊಂದು ಚಿತ್ರವನ್ನು ಮಾಡುತ್ತಿರುವುದಾಗಿ ನಿರ್ದೇಶಕ ಶಶಾಂಕ್ (Shashank) ಕಳೆದ ವರ್ಷವೇ ಘೋಷಿಸಿದ್ದರು. ಆದರೆ, ಆ ಚಿತ್ರದ ಬಗ್ಗೆ ಹೆಚ್ಚಿನ ವಿಷಯಗಳನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿ, ಮಾಧ್ಯಮದವರೆದುರು ಬಂದಿದ್ದಾರೆ ಶಶಾಂಕ್. ಈ ಚಿತ್ರದ ಶೀರ್ಷಿಕೆ ಅನಾವರಣ ಶುಕ್ರವಾರ ಆಗಿದೆ. (Brat Tiltle Launch) ಶಶಾಂಕ್ ನಿರ್ದೇಶನದ ಹೊಸ ಚಿತ್ರದ ಹೆಸರು ‘ಬ್ರ್ಯಾಟ್’. ಶೀರ್ಷಿಕೆ ಅನಾವರಣ ಮಾಡುವುದರ ಜೊತೆಗೆ, ಚಿತ್ರದ ಸಾರವನ್ನು ಹೇಳುವ ಹಾಡನ್ನು ಆನಂದ್ ಆಡಿಯೋದಲ್ಲಿ ಬಿಡುಗಡೆ…