
Ramesh Aravind as Daiji; ಘೋಷಣೆಯಾಗಿ ಒಂದೂವರೆ ವರ್ಷಗಳ ನಂತರ ‘ದೈಜಿ’ ಪ್ರಾರಂಭ
ರಮೇಶ್ ಅರವಿಂದ್ ಅಭಿನಯದ ‘ದೈಜಿ’ ಚಿತ್ರವು ಸುಮಾರು ಒಂದೂವರೆ ವರ್ಷಗಳ ಹಿಂದೆ ಘೋಷಣೆಯಾಗಿತ್ತು. ಆದರೆ, ಚಿತ್ರ ಮಾತ್ರ ಪ್ರಾರಂಭವಾಗಿರಲಿಲ್ಲ. ಚಿತ್ರದ ಬಹುತೇಕ ಚಿತ್ರೀಕರಣ ಲಂಡನ್ನಲ್ಲಿ ನಡೆಯುವುದರಿಂದ ಮತ್ತು ಚಿತ್ರತಂಡಕ್ಕೆ ವೀಸಾ ಸಿಗುವುದಕ್ಕೆ ವಿಳಂಬವಾಗಿದ್ದರಿಂದ, ಚಿತ್ರೀಕರಣ ಶುರುವಾಗಿರಲಿಲ್ಲ. ಇದೀಗ ಕೊನೆಗೂ ‘ದೈಜಿ’ ಚಿತ್ರಕ್ಕೆ ಮುಹೂರ್ತವಾಗಿದೆ. ಭಾನುವಾರದ ಬೆಳಗಿನ ಸುಮುಹೂರ್ತದಲ್ಲಿ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಈ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಇದು ರಮೇಶ್ ಅರವಿಂದ್ ಅಭಿನಯದ 106ನೇ ಚಿತ್ರವಾಗಿದ್ದು, ಈ ಹಿಂದೆ ‘ಶಿವಾಜಿ ಸುರತ್ಕಲ್’ ಮತ್ತು ‘ಶಿವಾಜಿ ಸುರತ್ಕಲ್…