
KVN Production: ಮಲಯಾಳಂ ಚಿತ್ರರಂಗಕ್ಕೆ ಹೊರಟ ಕೆವಿಎನ್ ಪ್ರೊಡಕ್ಷನ್ಸ್
ಕನ್ನಡದ ಜನಪ್ರಿಯ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್, ಕಳೆದ ವರ್ಷ ವಿಜಯ್ ಚಿತ್ರವನ್ನು ನಿರ್ಮಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿತ್ತು. ಇದೀಗ ಸಂಸ್ಥೆಯು ಮಲಯಾಳಂ ಚಿತ್ರವನ್ನು ನಿರ್ಮಿಸುವ ಮೂಲಕ ಮಾಲಿವುಡ್ಗೆ ಕಾಲಿಟ್ಟಿದೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಲಯಾಳಂನ ತೆಸ್ಪಿಯನ್ ಫಿಲ್ಮ್ಸ್ ಒಂದು ಹೊಸ ಚಿತ್ರಕ್ಕಾಗಿ ಕೈ ಜೋಡಿಸಿವೆ. ಈ ಚಿತ್ರವನ್ನು ಚಿದಂಬರಂ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ವರ್ಷ ಮಲಯಾಳಂನಲ್ಲಿ ಬಿಡುಗಡೆಯಾದ ಅತ್ಯಂತ ಯಶಸ್ವಿ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ನಿರ್ಮಿಸಿದ್ದು, ಇದೇ ಚಿದಂಬರಂ. ಇನ್ನು,…