ದರ್ಶನ್‍ ಜೀವನ ಹಾಳು ಮಾಡಿಕೊಂಡ್ರು; ರಮ್ಯಾ ಬೇಸರ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್‍ ಬಗ್ಗೆ ರಮ್ಯಾ ಹಿಂದೊಮ್ಮೆ ಮಾತನಾಡಿ, ಅಭಿಮಾನಿಗಳಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಈಗ ದರ್ಶನ್‍ ಬಗ್ಗೆ ಇನ್ನೊಮ್ಮೆ ಮಾತನಾಡಿರುವ ಅವರು, ದರ್ಶನ್‍ ಕಷ್ಟಪಟ್ಟು ಮೇಲೆ ಬಂದು ತಮ್ಮ ಜೀವನ ಹಾಳು ಮಾಡಿಕೊಂಡಿದ್ದಾರೆ ಎಂದು ಬೇಸರದಿಂದ ಹೇಳಿದ್ದಾರೆ. ಇತ್ತೀಚೆಗೆ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ರಮ್ಯಾ, ‘ಸುಪ್ರೀಂ ಕೋರ್ಟ್ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ ಮಗುವಿಗೆ ನ್ಯಾಯ ಸಿಕ್ಕಿದೆ. ಈ ಬೆಳವಣಿಗೆಯಿಂದ ಹೆಣ್ಣುಮಕ್ಕಳಿಗೆ ಧೈರ್ಯ ಬಂದಿದೆ’ ಎಂದು ಹೇಳಿದರು. ದರ್ಶನ್‍ ಕುರಿತು ಮಾತನಾಡಿರುವ…

Read More
Darshan

Darshan ಮತ್ತೆ ಜೈಲಿಗೆ; ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‍ಗೆ (Darshan) ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿದೆ. ಹಾಗೆಯೇ, ಎಂಟು ತಿಂಗಳ ಬಳಿಗೆ ದರ್ಶನ್ ಮತ್ತು ಇತರೆ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳಿಸಲಾಗಿದೆ. ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಗುರುವಾರ ಮಹತ್ವದ ತೀರ್ಪು ನೀಡಿದೆ. ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ, ಅವರನ್ನು ಬಂಧಿಸುವಂತೆ ಸೂಚಿಸಿದೆ. ಸುಪ್ರೀಂ ಕೋರ್ಟ್ ಆದೇಶ ಬರುತ್ತಿದ್ದಂತೆಯೇ, ದರ್ಶನ್‍ ಅವರನ್ನು…

Read More
Ramya

Darshan ಅಭಿಮಾನಿಗಳ ಟ್ರೋಲ್‍; ರಮ್ಯಾಗೆ Shiva Rajkumar ಬೆಂಬಲ

ರೇಣುಕಾಸ್ವಾಮಿ ಕುಟುಂಬದ ಪರವಾಗಿ ಮಾತನಾಡಿದ್ದಿಕ್ಕೆ ದರ್ಶನ್‍ (Darshan) ಅಭಿಮಾನಿಗಳಿಂದ ಸೋಷಿಯಲ್‍ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್‍ ಆಗಿದ್ದ ನಟಿ ರಮ್ಯಾಗೆ ಇದೀಗ ಶಿವರಾಜಕುಮಾರ್ (Shiva Rajkumar) ಬೆಂಬಲ ಸೂಚಿಸಿದ್ದಾರೆ. ರಮ್ಯಾ ಅವರ ನಿಲುವು ಸರಿಯಾಗಿದ್ದು, ಅವರ ಜೊತೆಗೆ ನಾವು ಸದಾ ನಿಲ್ಲುತ್ತೇವೆ ಎಂದು ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ಇಬ್ಬರೂ ಸೋಷಿಯಲ್‍ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಸುಪ್ರೀಂ ಕೋರ್ಟ್‍ನಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ನಂಬಿಕೆ ಇದೆ ಎಂದು ರಮ್ಯಾ ಇತ್ತೀಚೆಗೆ ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದು ದರ್ಶನ್‍…

Read More
The Devil

‘The Devil’ ಚಿತ್ರದ ಚಿತ್ರೀಕರಣ ಮುಕ್ತಾಯ; ಅ.31ಕ್ಕೆ ಚಿತ್ರ ಬಿಡುಗಡೆ?

ದರ್ಶನ್‍ ಅಭಿನಯದ ‘ದಿ ಡೆವಿಲ್‍’ (The devil) ಚಿತ್ರದ ಮಾತಿನ ಭಾಗದ ಚಿತ್ರೀಕರಣ ಕಳೆದ ತಿಂಗಳೇ ಮುಗಿದಿತ್ತು. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಇದೀಗ ಚಿತ್ರತಂಡವು ಇತ್ತೀಚೆಗೆ ಥಾಯ್ಲೆಂಡ್‍ನಲ್ಲಿ ಚಿತ್ರದ ಹಾಡುಗಳ ಚಿತ್ರೀಕರಣ ಮುಗಿಸಿದೆ. ಜೊತೆಗೆ ಡಬ್ಬಿಂಗ್‍ ಸಹ ಮುಗಿದಿದೆಯಂತೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಅಕ್ಟೋಬರ್ 31ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ‘ದಿ ಡೆವಿಲ್‍’ ಚಿತ್ರದ ಹಾಡುಗಳ ಚಿತ್ರೀಕರಣ ಈ ಮೊದಲೇ ಮುಗಿಯಬೇಕಿತ್ತು. ಆದರೆ, ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡುವುದಕ್ಕೆ ನ್ಯಾಯಾಲಯವು…

Read More