
Biographical tribute to Appu; ಶೀಘ್ರದಲ್ಲೇ ಬರಲಿದೆ ಅಪ್ಪು ʻಜೀವನಚರಿತ್ರೆʼ
1975ರ ಮಾರ್ಚ್ 17ರಂದು ಚೆನ್ನೈನಲ್ಲಿ ಜನಿಸಿದ ಲೋಹಿತ್, ಮುಂದೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆಗಿ ಬೆಳೆಯುತ್ತಾರೆ. ಬಾಲ ನಟನಾಗಿ 14 ಚಿತ್ರಗಳಲ್ಲಿ ನಟಿಸಿದ ಲೋಹಿತ್, ಮುಂದೆ ಪುನೀತ್ ರಾಜ್ಕುಮಾರ್ ಆಗಿ ಅಭಿಮಾನಿಗಳ ಪ್ರೀತಿಯ ಅಪ್ಪುವಾಗಿ ಕರುನಾಡಿಗೆ ಅರ್ಪಿತರಾದರು. ಪುನೀತ್ ಅವರ 50ನೇ ಜನ್ಮದಿನದ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಪ್ಪು ಅವರ ಜೀವನ ಚರಿತ್ರೆಯ ಕುರಿತ ಪುಸ್ತಕ (Biographical tribute to Appu) ಬರಲಿದೆ ಎಂಬ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ….