
Kiccha Sudeep; ಇದೇ ನನ್ನ ಕೊನೆಯ ಗ್ರಾಂಡ್ ಫಿನಾಲೆ: ವಿದಾಯದ ಪೋಸ್ಟ್ ಹಾಕಿದ ಸುದೀಪ್
ಕನ್ನಡ ‘ಬಿಸ್ ಬಾಸ್’ ಕಾರ್ಯಕ್ರಮದ ಕಳೆದ 11 ಸೀಸನ್‍ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಸುದೀಪ್, ಮುಂದಿನ ವರ್ಷದಿಂದ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಜನವರಿ 25 ಮತ್ತು ಜನವರಿ 26 ರಂದು ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ನಡೆಯಲಿದ್ದು, ಇದು ತಾವು ನಡೆಸಿಕೊಡುತ್ತಿರುವ ಕೊನೆಯ ಗ್ರಾಂಡ್ ಫಿನಾಲೆ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸೋಮವಾರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಸುದೀಪ್, ‘ಕಳೆದ 11 ಸೀಸನ್‍ಗಳ ಕಾಲ ‘ಬಿಗ್ ಬಾಸ್’ ಕಾರ್ಯಕ್ರಮವನ್ನು…