
BIFFes-2025; ಸಂವಿಧಾನಿಕ ಮೌಲ್ಯಗಳನ್ನು ಕಾಪಾಡಲು ಕಲೆಯಿಂದ ಮಾತ್ರ ಸಾಧ್ಯ: ಕಿಶೋರ್
ಬೆಂಗಳೂರು: ಸತ್ತಂತಿಹರಲು ಬಡಿದೆಚ್ಚರಿಸು.. ಎಂಬ ಕುವೆಂಪು ಕವಿವಾಣಿಯಿಂದ ಚಲನಚಿತ್ರೋತ್ಸವದ ರಾಯಭಾರಿ ಕಿಶೋರ್ ಮಾತನ್ನು ಆರಂಭಿಸಿದರು. ನನ್ನ ಪ್ರಕಾರ ಜನರ ದನಿಯಾಗದ ಕಲೆ ಸಂಪೂರ್ಣವಲ್ಲ, ಅರ್ಥಪೂರ್ಣವೂ ಅಲ್ಲ. ಸರ್ವಜನಾಂಗದ ಶಾಂತಿಯ ತೋಟ ಎಂಬ ಚಿತ್ರೋತ್ಸವದ ಅಡಿ ಬರಹ ಹತ್ತು ಹಲವು ಭಾಷೆ ಸಂಸ್ಕೃತಿಯ ಸಿನಿಮಾ ಇಲ್ಲಿ ಪ್ರದರ್ಶನ ಆಗುತ್ತಿರುವ ಹಬ್ಬದ ಆಶಯವನ್ನು ಹೇಳುತ್ತದೆ. ವೈವಿಧ್ಯತೆಯ ನಡುವೆ ಸಕಲ ಜೀವಿಗಳಲ್ಲಿ ಸೌಹಾರ್ಧ, ಶಾಂತಿ ಮತ್ತು ಪ್ರೀತಿಯಿಂದ ಬದುಕುತ್ತಿರುವ ಎಷ್ಟು ಉದಾಹರಣೆಗಳು ನಮಗೆ ಸಿಗುತ್ತದೆ. ಕೇವಲ ಬೆರಳೆಣಿಕೆಯಷ್ಟು ಅಷ್ಟೇ, ಅಂತಹ ಬೆರಳೆಣಿಕೆಯಲ್ಲಿ…