
ಹೋರಾಟ ಮಾಡಲು ಹೊರಟ Pruthvi Ambaar ; ‘ಕೊತ್ತಲವಾಡಿ’ ಟ್ರೇಲರ್ ಬಿಡುಗಡೆ
‘ದಿಯಾ’ ಚಿತ್ರದ ನಂತರ ಲವ್ವರ್ ಬಾಯ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡವರು ಪೃಥ್ವಿ ಅಂಬಾರ್ (Pruthvi Ambaar) . ‘ಮತ್ಸ್ಯಗಂಧ’ ಚಿತ್ರದಲ್ಲಿ ಅವರು ತಮ್ಮ ಇಮೇಜ್ ಮುರಿಯುವುದಕ್ಕೆ ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಇದೀಗ ‘ಕೊತ್ತಲವಾಡಿ’ ಚಿತ್ರದಲ್ಲಿ ಪೃಥ್ವಿ ಬೇರೆಯದೇ ರೀತಿ ಕಾಣಿಸುತ್ತಿದ್ದಾರೆ. ಯಶ್ ತಾಯಿ ಪುಷ್ಪ ಅರುಣ್ ಕುಮಾರ್, ತಮ್ಮ ಪಿ.ಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸುತ್ತಿರುವ ಚಿತ್ರ ‘ಕೊತ್ತಲವಾಡಿ’. ಈ ಚಿತ್ರಕ್ಕೆ ಶ್ರೀರಾಜ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಆಗಸ್ಟ್ 01ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು,…