Golden Star Ganesh; ಇದುವರೆಗೂ ಮಾಡದ ವಿಭಿನ್ನ ಪಾತ್ರದಲ್ಲಿ ಗಣೇಶ್; ಯಾವ ಪಾತ್ರ ಅದು?

ಗಣೇಶ್‍ ಚಿತ್ರಗಳೆಂದರೆ ಅದೇ ರೊಮ್ಯಾಂಟಿಕ್‍ ಕಾಮಿಡಿಗಳು, ಒಂದೇ ತರಹದ ವಿಭಿನ್ನ ಹೆಸರಿನ ಚಿತ್ರಗಳು ಎಂದು ಹಣೆಪಟ್ಟಿ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಗಣೇಶ್‍ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಬೇರೆ ತರಹದ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಪಿನಾಕ’ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಗಣೇಶ್‍ (golden star ganesh) ಹೇಳಿಕೊಂಡಿದ್ದರು. ಈಗ ಹೊಸ ಚಿತ್ರದಲ್ಲೂ ಇದುವರೆಗೂ ಮಾಡದ ಒಂದು ವಿಭಿನ್ನ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಗಣೇಶ್‍ ಹೇಳಿಕೊಂಡಿದ್ದಾರೆ. ಅಂದಹಾಗೆ, ಗಣೇಶ್‍ ಅಭಿನಯದ ಹೊಸ ಚಿತ್ರ ಭಾನುವಾರ ಸೆಟ್ಟೇರಿದೆ. ಅರಸು…

Read More

Vijay Raghavendra in Mahaan; ಮನರಂಜನೆ ಜೊತೆಗೆ ಸಂದೇಶ; ‘ಮಹಾನ್’ ಆದ ವಿಜಯ್‍ ರಾಘವೇಂದ್ರ

ವಿಜಯ್‍ ರಾಘವೇಂದ್ರ (Vijay Raghavendra) ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದಾಗಿ ಪಿ.ಸಿ. ಶೇಖರ್‌ (P C Shekar) ಕಳೆದ ವರ್ಷವೇ ಘೋಷಿಸಿದ್ದರು. ಆದರೆ, ಇತ್ತೀಚೆಗೆ ಆ ಚಿತ್ರದ ಸುದ್ದಿಯೇ ಇರಲಿಲ್ಲ. ಈಗ ಚಿತ್ರ ಮತ್ತೆ ಮುನ್ನೆಲೆಗೆ ಬಂದಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಅದಕ್ಕೂ ಮೊದಲು ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲಾಗಿದೆ. ಈ ಚಿತ್ರಕ್ಕೆ ‘ಮಹಾನ್‍’ (Mahaan) ಎಂಬ ಹೆಸರನ್ನು ಇಡಲಾಗಿದ್ದು, ಶಿವರಾಜಕುಮಾರ್‌ (Shiva Rajkumar) ಶೀರ್ಷಿಕೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಚಿತ್ರವನ್ನು ಚಿತ್ರವನ್ನು ಅಲೆಯನ್ಸ್…

Read More

Kuladalli Keelyavudo; ಆನೆ ಬಿಡುಗಡೆ ಮಾಡಿತು ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ಅಭಿನಯದ ‘ಕುಲದಲ್ಲಿ ಕೀಳ್ಯಾವುದೋ’ (Kuladalli Keelyavudo) ಚಿತ್ರವು ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರವನ್ನು ಜನರಿಗೆ ತಲುಪಿಸುವುದಕ್ಕೆ ಚಿತ್ರತಂಡ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಇತ್ತೀಚೆಗೆ ಕುಂಭ ಮೇಳದಲ್ಲಿ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಲಾಗಿತ್ತು. ಯೋಗರಾಜ್‍ ಭಟ್‍ ಬರೆದಿರುವ ‘ನಮ್ ಪೈಕಿ ಒಬ್ಬ ಹೋಗ್ಬುಟ …’ ಎಂಬ ಹಾಡನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಚಿತ್ರದ ಇನ್ನೊಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಬರೀ ಬಿಡುಗಡೆ ಮಾಡಲಾಗಿದೆ ಅಷ್ಟೇ ಅಲ್ಲ, ವಿಶೇಷವಾಗಿ ಬಿಡುಗಡೆ ಮಾಡಿಸಲಾಗಿದೆ….

Read More

Chomana Dudi; ಚೋಮನ ದುಡಿಗೆ ಅರ್ಧಶತಕ; ಕಾರಂತ ದ್ವಯರ ಅದ್ಭುತಗಳ ಮೆಲುಕು

ಕನ್ನಡ ಸಿನಿಮಾ ಪರಂಪರೆಯನ್ನು ನೋಡುತ್ತಾ ಬಂದರೆ ಅಲ್ಲಿ ರೂಪಾಂತರಗಳನ್ನು ಹೆಚ್ಚು ಕಾಣುತ್ತೇವೆ. ಮೊದಲ ವಾಕ್ಚಿತ್ರ ಸತಿ ಸುಲೋಚನ ನಾಟಕವನ್ನೇ ಸಿನಿಮಾ ಮಾಡಿದ್ದಾಗಿತ್ತು. ಇದು ರಂಗಭೂಮಿಯ ರೂಪಾಂತರ ಎಂದು ನಾವು ನೋಡಬಹುದು. ಧ್ವನಿ ಇರುವ ಚಿತ್ರಕ್ಕೂ ಮೊದಲೇ ಕಾದಂಬರಿ ಆಧಾರಿತ ಸಿನಿಮಾ ಬಂದಿತ್ತು. ದೇವುಡು ನರಸಿಂಹ ಶಾಸ್ತ್ರಿ ಅವರ ʻಕಳ್ಳರ ಕೂಟʼ ಕಾದಂಬರಿಯನ್ನು ʻಕರುಣೆಯೇ ಕುಟುಂಬದ ಕಣ್ಣುʼ ಎಂಬ ಸಿನಿಮಾ ಆಗಿ ಮಾಡಲಾಗಿತ್ತು. ಈ ಸಂಪ್ರದಾಯ ಈಗಲೂ ಮುಂದುವರೆದಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಾಹಿತ್ಯ ಲೋಕ ಮತ್ತು ಸಿನಿಮಾ ಜಗತ್ತು ಒಂದನ್ನೊಂದು…

Read More