Shiva Rajkumar; ಪಿ. ವಾಸು ಸಹೋದರಿಯ ಮಗನ ಚಿತ್ರದಲ್ಲಿ ಶಿವಣ್ಣ ಅಭಿನಯ

ತಮಿಳಿನ ಜನಪ್ರಿಯ ನಿರ್ದೇಶಕ ಪಿ. ವಾಸು ನಿರ್ದೇಶನದ ‘ಶಿವಲಿಂಗ’ ಮತ್ತು ‘ಆಯುಷ್ಮಾನ್‍ ಭವ’ ಚಿತ್ರಗಳಲ್ಲಿ ಶಿವರಾಜಕುಮಾರ್ (Shiva Rajkumar) ಅಭಿನಯಿಸಿದ್ದರು. ಈಗ ಪಿ. ವಾಸು ಅವರ ಸಹೋದರಿಯ ಮಗನ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗೆ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶಿವರಾಜಕುಮಾರ್ ಅಭಿನಯದ ಹೊಸ ಚಿತ್ರದ ಘೋಷಣೆ ಅಧಿಕೃತವಾಗಿ ಆಗಿದೆ. ಶ್ರಿತಿಕ್ ಮೋಷನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಸಾಗರ್, ಕೃಷ್ಣಕುಮಾರ್ ಹಾಗೂ ಸೂರಜ್ ಶರ್ಮ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪಿ. ವಾಸು…

Read More

Preethi Prema Panganama; ಪ್ರೀತಿ, ಪ್ರೇಮ ಮಾಡಿ ಪಂಗನಾಮ ಹಾಕಲು ಹೊರಟವರ ಕಥೆ ಇದು …

ಕೆಲವು ವರ್ಷಗಳ ಹಿಂದೆ ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ಜನಪ್ರಿಯ ಕಾರ್ಯಕ್ರಮವೆಂದರೆ ಅದು ‘ಹಾಸ್ಯ ಲಾಸ್ಯ’. ಮುತ್ತುರಾಜ್‍ ಮತ್ತು ಶ್ರೀಕಂಠ ಜೋಡಿಯ ಈ ಕಾರ್ಯಕ್ರಮ ಸಾಕಷ್ಟು ಯಶಸ್ವಿಯಾಗಿತ್ತು. ಈಗ ಈ ಜೋಡಿ, ಹೊಸ ಚಿತ್ರವೊಂದರ ಮೂಲಕ ವಾಪಸ್ಸಾಗಿದ್ದಾರೆ. ಸಿನಿಮಾ ಮಾಡಬೇಕು ಎನ್ನುವುದು ಮುತ್ತುರಾಜ್‍ ಮತ್ತು ಶ್ರೀಕಂಠ ಅವರ ಬಹುವರ್ಷಗಳ ಕನಸಾಗಿತ್ತಂತೆ. ಅದು ಈಗ ‘ಪ್ರೀತಿ ಪ್ರೇಮ ಪಂಗನಾಮ’ (Preethi Prema Panganama) ಎಂಬ ಹೊಸ ಚಿತ್ರದ ಮೂಲಕ ಈಡೇರಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಶ್ರೀಕಂಠ…

Read More

Puppy; ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಮೇ1ಕ್ಕೆ ಬಿಡುಗಡೆ

ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಶ್ವಾನದ ಸುತ್ತ ಸುತ್ತವ ‘777 ಚಾರ್ಲಿ’ ಮತ್ತು ‘ನಾನು ಮತ್ತು ಗುಂಡ’ ಚಿತ್ರಗಳು ಬಿಡುಗಡೆಯಾಗಿವೆ. ಸದ್ಯದಲ್ಲೇ ‘ನಾನು ಮತ್ತು ಗುಂಡ 2’ ಚಿತ್ರಗಳು ಬಿಡುಗಡೆಯಾಗಬೇಕಿದೆ. ಹೀಗಿರುವಾಗಲೇ ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಎಂಬ ಇನ್ನೊಂದು ಚಿತ್ರ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಒಂದಿಷ್ಟು ಹೊಸಬರು ಸೇರಿಕೊಂಡು ಉತ್ತರ ಕರ್ನಾಟದ ಜವಾರಿ ಭಾಷೆಯಲ್ಲೊಂದು ‘ಪಪ್ಪಿ’ (Puppy) ಎಂಬ ಸಿನಿಮಾ ಮಾಡಿದ್ದು, ಈ ಟ್ರೇಲರ್‌ ಈಗಾಗಲೇ ಬಿಡುಗಡೆ ಆಗಿದೆ. ಈ ಚಿತ್ರ್ಕೆಕ್ಕೆ ಇದೀಗ…

Read More

Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್‍ ರಾವ್‍

‘ಇದು ಇಲ್ಲಿಗೆ ಮುಗಿದಿಲ್ಲ. ನನಗೆ ತುಂಬಾ ತಾಳ್ಮೆ ಇದೆ. ಚಿತ್ರರಂಗದಲ್ಲಿ 25 ವರ್ಷ ಇಂಥದ್ದೊಂದು ಹಿಟ್‍ಗೆ ಕಾದಿದ್ದೇನೆ. ಇನ್ನೂ ಮುಂದೆ ಜನ ಬರುತ್ತಾರೆ, ಇಲ್ಲಿಗೇ ಎಲ್ಲಾ ಮುಗಿದಿಲ್ಲ ಎಂಬ ನಂಬಿಕೆ ಇದೆ …’ ಹಾಗೆ ಹೇಳಿದ್ದು ಅಜೇಯ್‍ ರಾವ್‍. ಅವರ ಅಭಿನಯದ ಮತ್ತು ನಿರ್ಮಾಣದ ‘ಯುದ್ಧಕಾಂಡ’ ಚಿತ್ರವು ಏಪ್ರಿಲ್‍ 18ರಂದು ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕಾಳಜಿ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದರೂ, ಗಳಿಕೆ ಓಹೋ ಎನ್ನುವಂತದ್ದೇನೂ ಇಲ್ಲ. ‘ಯುದ್ಧಕಾಂಡ’ 100 ದಿನ ಪ್ರದರ್ಶನ ಕಾಣುತ್ತದೆ…

Read More