
ಹಾಡಿನ ಮೂಲಕ ಏನೋ ಸೂಚನೆ ಕೊಡ್ತಿದ್ದಾರೆ Manso Re
ಮಂಸೋರೆ ತಮ್ಮ ಶೈಲಿಯ ಚಿತ್ರಗಳನ್ನು ಬಿಟ್ಟು, ಒಂದು ಪ್ರೇಮಕಥೆಯನ್ನು ನಿರ್ದೇಶಿಸುತ್ತಿರುವ ವಿಷಯ ನೆನಪಿದೆಯಲ್ವಾ? ‘ದೂರ ತೀರ ಯಾನ’(Doora Theera Yaana) ಎಂಬ ಈ ಚಿತ್ರದಲ್ಲಿ ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದು, ಈ ಚಿತ್ರದ ಮೊದಲ ಹಾಡು ಎಂ.ಆರ್.ಟಿ ಮ್ಯೂಸಿಕ್ (MRT Music) ಚಾನಲ್‍ನಲ್ಲಿ ಬಿಡಗುಡೆಯಾಗಿದೆ. ಡಿ ಕ್ರಿಯೇಶನ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ, ಆರ್. ದೇವರಾಜ್ ನಿರ್ಮಿಸುತ್ತಿರುವ ‘ದೂರ ತೀರ ಯಾನ’ ಚಿತ್ರಕ್ಕೆ ಕವಿರಾಜ್ ‘ಇದೇನಿದು ಸೂಚನೆ …’ ಎಂಬ ಪ್ರೇಮಗೀತೆ ಬರೆದಿದ್ದು, ಬಕ್ಕೇಶ್-ಕಾರ್ತಿಕ್…