HIT: The 3rd Case Teaser

HIT: The 3rd Case Teaser; ನಾನಿಯ ʻಅರ್ಜುನ್‌ ಸರ್ಕಾರ್‌ʼ ಲುಕ್‌ ಹೀಗಿದೆ..!

ಹಿಟ್‌ 2 ಸಿನಿಮಾದ ಕೊನೆಯಲ್ಲಿ ನಾನಿ ಬಂದು ಮೂರನೇ ಕೇಸ್‌ ತೆಗೆದುಕೊಳ್ಳುವುದಾಗಿ ಹೇಳಿ ಹೋಗುತ್ತಾರೆ. ಅಲ್ಲಿಂದ ಆರಂಭವಾದ ಕುತೂಹಲಕ್ಕೆ ಅಂತೂ ಇಂತೂ ತೆರೆಬಿದ್ದಿದೆ. ನಾನಿ ಅವರ ಬರ್ತ್‌ಡೇಗೆ ಹಿಟ್‌ 3 ಸಿನಿಮಾ ತಂಡ ಕೆಣಕು ನೋಟವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನೂ ತಿಳಿಸಿದೆ. ನಾನಿ ಫ್ಯಾನ್ಸ್‌ ಮತ್ತು ಕ್ರೈಮ್‌ ಥ್ರಿಲ್ಲರ್‌ ಜಾನರ್‌ ಸಿನಿಮಾ ಪ್ರೇಮಿಗಳಿಗೇ ಇದು ಸಂತಸದ ಸುದ್ದಿ. ಹಿಟ್ 1 ಚಿತ್ರದಲ್ಲಿ ವಿಶ್ವಕ್ಸೇನ್, ಹಿಟ್ 2 ನಲ್ಲಿ ಅಡವಿ ಶೇಶ್ ನಟಿಸಿದ್ದರು. ಹಿಟ್‌…

Read More
Vidya Vijays film Bebo

Bebo; ಒಂದು ‘ತೂಕ’ದ ಕಥೆ; ಈ ‘ಬೇಬೋ’, ಕರೀನಾ ಅಲ್ಲ …

‘ಬೇಬೋ’ ಎಂಬ ಹೆಸರು ಕೇಳುತ್ತಿದ್ದಂತೆಯೇ ಮೊದಲಿಗೆ ನೆನಪಿಗೆ ಬರುವುದು ಬಾಲಿವುಡ್‍ ನಟಿ ಕರೀನಾ ಕಪೂರ್‌. ಆಕೆಗೆ ಇಂಥದ್ದೊಂದು ಅಡ್ಡಹೆಸರಿದ್ದು, ಕರೀನಾ ಅವರನ್ನು ಅವರ ಆಪ್ತರು ಅದೇ ಹೆಸರಿನಲ್ಲಿ ಕರೆಯುತ್ತಾರೆ. ಈಗ ಕನ್ನಡದಲ್ಲಿ ‘ಬೇಬೋ’ ಎಂಬ ಹೆಸರು ಸದ್ದಿಲ್ಲದೆ ಶುರುವಾಗಿದ್ದು, ಈ ಚಿತ್ರಕ್ಕೆ ಕರೀನಾ ಕಪೂರ್‌ ಅವರೇ ಸ್ಫೂರ್ತಿಯಾಗಿದ್ದು, ‘ಆದ್ರೆ ಇವ್ಳು ಕರೀನಾ ಅಲ್ಲ’ ಎಂಬ ಅಡಿಬರಹವೂ ಇದೆ. ಈ ಹಿಂದೆ ‘ಯುದ್ಧ ಮತ್ತು ಸ್ವಾತಂತ್ರ್ಯ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ವಿದ್ಯಾ, ಈಗ ‘ಬೇಬೋ’ ಎಂಬ ಹೆಸರಿನ…

Read More

Love OTP: ‘ಲವ್‍ OTP’ಗಾಗಿ ಕಾಯುತ್ತಿದ್ದಾರೆ ಅನೀಶ್ ತೇಜೇಶ್ವರ್

ಅನೀಶ್‍ ತೇಜೇಶ್ವರ್‍ ಹೊಸ ಚಿತ್ರವೊಂದರಲ್ಲಿ ನಟಿಸುವುದರ ಜೊತೆಗೆ, ಆ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬ ವಿಷಯವೊಂದು ಕೆಲವು ದಿನಗಳ ಹಿಂದಷ್ಟೇ ಬಂದಿತ್ತು. ಅಷ್ಟೇ ಅಲ್ಲ, ಪೋಸ್ಟರ್ ಸಹ ಬಿಡುಗಡೆಯಾಗಿತ್ತು. ಆದರೆ, ಚಿತ್ರದ ಶೀರ್ಷಿಕೆ ಏನು ಎಂಬುದನ್ನು ಅನೀಶ್‍ ಬಿಟ್ಟುಕೊಟ್ಟಿರಲಿಲ್ಲ. ಸದ್ಯದಲ್ಲೇ ತಿಳಿಸುವುದಾಗಿ ಅವರು ಹೇಳಿದ್ದರು. ಈಗ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಅಧಿಕೃತವಾಗಿ ಘೋಷಿಸಲಾಗಿದೆ. ಚಿತ್ರಕ್ಕೆ ‘ಲವ್‍ OTP’ ಎಂಬ ಹೆಸರನ್ನು ಇಡಲಾಗಿದೆ. OTP ಎಂದರೆ One Time Password ಅಂತ ಮೊಬೈಲ್‍ ಬಳಕೆ ಮಾಡುವವರಿಗೆ ಸಹಜವಾಗಿಯೇ ಗೊತ್ತಿರುತ್ತದೆ. ಇಲ್ಲಿ…

Read More

ಮಾರ್ಚ್ 1ರಿಂದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು: 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2025ರ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾದ ಚಲನಚಿತ್ರಗಳ ಪಟ್ಟಿ ಪ್ರಕಟ. ಚಲನಚಿತ್ರೋತ್ಸವವು (BIFFes) ಮಾರ್ಚ್ 1ರಿಂದ ಆರಂಭವಾಗಲಿದ್ದು, ಸುಮಾರು 60 ದೇಶಗಳಿಂದ 200ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶನ ಕಾಣಲಿವೆ.

Read More