Veera Kambala; ದುಬೈನಲ್ಲಿ ಚಿತ್ರೀಕರಣ ಮುಗಿಸಿ ಮರಳಿದ ರಾಜೇಂದ್ರ ಸಿಂಗ್‌ ಬಾಬು

ದಕ್ಷಿಣ ಕನ್ನಡದ ಪ್ರಸಿದ್ಧ ಕ್ರೀಡೆ ಕಂಬಳವನ್ನೇ ಮುಖ್ಯವಾಗಿಟ್ಟುಕೊಂಡು ಹಿರಿಯ ನಿರ್ದೇಶಕ ಎಸ್‌. ವಿ ರಾಜೇಂದ್ರ ಸಿಂಗ್‌ ಬಾಬು ಅವರು ವೀರ ಕಂಬಳ (Veera Kambala) ಸಿನಿಮಾ ಮಾಡುತ್ತಿದ್ದಾರೆ. ಅರುಣ್‌ ರೈ ತೊಡರ್ ಅವರು ಈ ಚಿತ್ರವನ್ನು ಕನ್ನಡ ಹಾಗೂ ತುಳು ಭಾಷೆಗಳಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರ ತಂಡ ದೂರದ ದುಬೈನಲ್ಲಿ ಚಿತ್ರೀಕರಣ ಮುಗಿಸಿ ತವರಿಗೆ ಮರಳಿದೆ. ನಟ ಆದಿತ್ಯ, ನಿರ್ಮಾಪಕ ಅರುಣ್‌ ರೈ ತೊಡರ್‌, ಶೋಭ್‌ ರಾಜ್‌ ಮುಂತಾದವರು ದುಬೈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಕಂಬಳ ಕ್ರೀಡೆಯನ್ನೇ…

Read More
rajinikanth pooja-hegde

Pooja Hegde; ರಜನಿಕಾಂತ್‌ ʻಕೂಲಿʼಯಲ್ಲಿ ಪೂಜಾ ಹೆಗ್ಡೆ..?

ರಜನಿಕಾಂತ್ (Rajinikanth), ಅಕ್ಕಿನೇನಿ ನಾಗಾರ್ಜುನ, ಉಪೇಂದ್ರ ಅವರಂಥ ಸ್ಟಾರ್ ಕಲಾವಿದರ ದಂಡೇ ಇರುವ ‘ಕೂಲಿ’ ಚಿತ್ರದಲ್ಲಿ ಬಹುಭಾಷಾ ನಟಿ ಪೂಜಾ ಹೆಗ್ಡೆ (Pooja Hegde) ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರಿಕ್ಷೀತ ಚಿತ್ರ ‘ಕೂಲಿ’. ರಜನಿಕಾಂತ್‌ ಜತೆ ಪೂಜಾ ಹೆಗ್ಡೆ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ. ಈ ಹಾಡಿನ ಚಿತ್ರೀಕರಣವನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಜೈಲರ್‌ ಚಿತ್ರದಲ್ಲಿ…

Read More
Chikkanna-Somashekar-Kattigenahalli

Chikkanna ; ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ ಸಿನಿಮಾದಲ್ಲಿ ಚಿಕ್ಕಣ್ಣ; ಉಪಾಧ್ಯಕ್ಷನ ಬಿಗ್‌ ಬಜೆಟ್‌ ಮೂವಿ ಇದು

ನಾಯಕ ನಟನಾಗಿ ಪ್ರಮೋಷನ್‌ ಪಡೆದ ಚಿಕ್ಕಣ್ಣ, ಈಗ ಮತ್ತೊಂದು ಸಿನಿಮಾದಲ್ಲಿ ಹೀರೋ ಆಗಿ ಮಿಂಚಲಿದ್ದಾರೆ. ಕಳೆದ ವರ್ಷ (2024) ಉಪಾಧ್ಯಕ್ಷ ಮೂಲಕ ಯಶಸ್ಸನ್ನು ಗಳಿಸಿದ ಚಿಕ್ಕಣ್ಣ (Chikkanna), ಮುಂದಿನ ಸಿನಿಮಾದ ಸ್ಕ್ರಿಪ್ಟ್‌ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ್ದಾರೆ. ಈಗ ಮತ್ತೊಂದು ಕಥೆಗೆ ನಾಯಕನಾಗಿ ಚಿಕ್ಕಣ್ಣ ಒಪ್ಪಿಕೊಂಡಿದ್ದಾರೆ. ಈ ಹಿಂದೆ ವಿನೋದ್ ಪ್ರಭಾಕರ್ ನಟನೆಯ ‘ಫೈಟರ್’ ಚಿತ್ರವನ್ನು ನಿರ್ಮಿಸಿದ್ದ ಸೋಮಶೇಖರ್ ಕಟ್ಟಿಗೇನಹಳ್ಳಿ (Somashekar Kattigenahalli) ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರಕ್ಕೆ ಮಹೇಶ್ ಕಥೆ ಬರೆದಿದ್ದು, ನಿರ್ಮಾಪಕರು ಶೀಘ್ರದಲ್ಲೇ…

Read More
Manthan-Shyam-Benegal

Shyam Benegal; ಲಾಸ್ ಏಂಜಲೀಸ್‌ ಸಿನಿಮೋತ್ಸವಕ್ಕೆ ಶ್ಯಾಮ್‌ ಬೆನಗಲ್‌ ನಿರ್ದೇಶನದ ‘ಮಂಥನ್‌’ ಆಯ್ಕೆ

ಬೆಂಗಳೂರು: ಅಮೆರಿಕದ ಲಾಸ್‌ ಏಂಜಲೀಸ್‌ನ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್‌ನಲ್ಲಿ ನಡೆಯಲಿರುವ ಸಿನಿಮೋತ್ಸವದಲ್ಲಿ ಶ್ಯಾಮ್‌ ಬೆನಗಲ್‌ ನಿರ್ದೇಶನದ ‘ಮಂಥನ್‌’ ಸಿನಿಮಾವು ಪ್ರದರ್ಶನವಾಗಲಿದೆ. ಭಾರತದ ಪ್ರಮುಖ 12 ಸಿನಿಮಾಗಳು ‘ಬಣ್ಣದಲ್ಲಿ ಭಾವಪರವಶತೆ: ಭಾರತೀಯ ವೈವಿಧ್ಯಮಯ ಸಿನಿಮಾ’ ಎಂಬ ವಿಭಾಗದಡಿ ಪ್ರದರ್ಶನವಾಗುತ್ತಿದ್ದು, ಇದರಲ್ಲಿ ಮಾರ್ಚ್‌ 10ರಂದು ‘ಮಂಥನ್‌’ ಪ್ರದರ್ಶನಗೊಳ್ಳಲಿದೆ. ಮಂಥನ್‌ ಜಗತ್ತಿನ ಮೊದಲ ಕ್ರೌಡ್‌ಫಂಡಿಂಗ್‌ ಸಿನಿಮಾ ಎಂಬ ಹೆಗ್ಗಳಿಕೆ ಹೊಂದಿದೆ. ಸ್ಮಿತಾ ಪಾಟೀಲ್‌, ನಾಸಿರುದ್ದೀನ್ ಶಾ, ಗಿರೀಶ್ ಕಾರ್ನಾಡ್‌, ಅಮರೀಶ್ ಪುರಿ ಅವರು ಪ್ರಮುಖ ತಾರಾಗಣದಲ್ಲಿದ್ದಾರೆ….

Read More