Zee 5 ಜೊತೆ ಕೈ ಜೋಡಿಸಿದ KRG ಸ್ಟುಡಿಯೋಸ್‍; ವೆಬ್ ಸಿರೀಸ್ ನಿರ್ಮಾಣ

ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್‍ ನೇತೃತ್ವದ KRG ಸ್ಟುಡಿಯೋಸ್ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ. ಚಿತ್ರ ನಿರ್ಮಾಣ ಹಾಗೂ ವಿತರಣೆಯಲ್ಲಿ ಹೆಸರು ಮಾಡಿರುವ KRG ಸ್ಟುಡಿಯೋಸ್ ವೆಬ್ ಸಿರೀಸ್ ನಿರ್ಮಾಣಕ್ಕಿಳಿದೆ. Zee 5 ಜೊತೆ ಕೈ ಜೋಡಿಸುವ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ವೆಬ್‍ ಸರಣಿಗಳ ನಿರ್ಮಾಣಕ್ಕೆ ಕೈಹಾಕಿದೆ. ಮೊದಲ ಹಂತವಾಗಿ ‘ಶೋಧ’ ಎಂಬ ವೆಬ್ ಸರಣಿಯನ್ನು KRG ನಿರ್ಮಿಸಿದೆ. ಈ ವೆಬ್‍ ಸರಣಿಯನ್ನು ಸುನೀಲ್ ಮೈಸೂರು ನಿರ್ದೇಶಿಸಿದ್ದು, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸರಣಿಯಾಗಿದೆ….

Read More

ತಮಿಳು ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ ರಜನಿಕಾಂತ್‍ ‘Coolie’

ರಜನಿಕಾಂತ್‍ ಅಭಿನಯದ ‘ಕೂಲಿ’ (Coolie) ಹೊಸ ದಾಖಲೆಯನ್ನೇ ಬರೆದಿದೆ. ಮೊದಲನೆಯದಾಗಿ, ಜಗತ್ತಿನಾದ್ಯಂತ ಮೊದಲ ದಿನ ಸುಮಾರು 6.8 ಲಕ್ಷ ಟಿಕೆಟ್‍ಗಳು ಮಾರಾಟವಾಗಿದ್ದವು. ಅಡ್ವಾನ್ಸ್ ಬುಕ್ಕಿಂಗ್‍ನಿಂದಲೇ 50 ಕೋಟಿ ರೂ. ಗಳಿಕೆಯಾಗಿದೆ ಎಂದು ಹೇಳಲಾಗಿತ್ತು. ಇದಕ್ಕೂ ಮೊದಲು ಯಾವ ಚಿತ್ರವೂ ಇಂಥದ್ದೊಂದು ದಾಖಲೆ ಮಾಡಿರಲಿಲ್ಲ. ಈಗ ಚಿತ್ರವು ಮೊದಲ ದಿನ 151 ಕೋಟಿ ರೂ. ಗಳಿಕೆ ಮಾಡುವ ಹೊಸ ದಾಖಲೆ ಮಾಡಿದೆ. ಚಿತ್ರವು ಮೊದಲ ದಿನವೇ ಚಿತ್ರದ ಗಳಿಕೆ 100 ಕೋಟಿ ರೂ. ಮೀರಬಹುದು ಎಂದು ಮೊದಲೇ ಅಂದಾಜಿಸಲಾಗಿತ್ತು….

Read More
Darshan

Darshan ಮತ್ತೆ ಜೈಲಿಗೆ; ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‍ಗೆ (Darshan) ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿದೆ. ಹಾಗೆಯೇ, ಎಂಟು ತಿಂಗಳ ಬಳಿಗೆ ದರ್ಶನ್ ಮತ್ತು ಇತರೆ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳಿಸಲಾಗಿದೆ. ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಗುರುವಾರ ಮಹತ್ವದ ತೀರ್ಪು ನೀಡಿದೆ. ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ, ಅವರನ್ನು ಬಂಧಿಸುವಂತೆ ಸೂಚಿಸಿದೆ. ಸುಪ್ರೀಂ ಕೋರ್ಟ್ ಆದೇಶ ಬರುತ್ತಿದ್ದಂತೆಯೇ, ದರ್ಶನ್‍ ಅವರನ್ನು…

Read More
Komal

ಕೋಮಲ್ ಜೊತೆಗೆ Sonal; ‘ರೋಲೆಕ್ಸ್’ ಚಿತ್ರೀಕರಣ ಮುಕ್ತಾಯ

ಮಾದೇವ’ ನಂತರ ಸೋನಲ್‍ (Sonal) ಮುಂದಿನ ಚಿತ್ರ ಯಾವುದು? ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿಯೇ ಇತ್ತು. ಏಕೆಂದರೆ, ಇತ್ತೀಚೆಗೆ ಸೋನಲ್ ಯಾವೊಂದು ಹೊಸ ಚಿತ್ರದಲ್ಲೂ ನಟಿಸುತ್ತಿರುವ ಸುದ್ದಿ ಇರಲಿಲ್ಲ. ಮದುವೆಯಾದ ಮೇಲೆ ಸೋನಲ್‍ ನಟನೆಯಿಂದ ಹಿಂದೆ ಸರಿಯುತ್ತಾರಾ? ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುವಾಗಲೇ, ಸೋನಲ್‍ ಹೊಸದೊಂದು ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂದಿದೆ. ಮಧು ಫಿಲಂ ಸರ್ಕ್ಯೂಟ್ಸ್ ಸಂಸ್ಥೆ ಲಾಂಛನದಲ್ಲಿ ಅಂಬಟಿ ಮಧು ಮೋಹನಕೃಷ್ಣ ನಿರ್ಮಿಸುತ್ತಿರುವ ಮೊದಲ ಚಿತ್ರ ‘‌ರೋಲೆಕ್ಸ್’. ಈ ಹಿಂದೆ ‘ಬಿಲ್ ಗೇಟ್ಸ್’ ಚಿತ್ರವನ್ನು ನಿರ್ದೇಶನ…

Read More