‘Kothalavadi’ ಬಿಡುಗಡೆ ದಿನಾಂಕ ಫಿಕ್ಸ್; ಆ. 1ಕ್ಕೆ ಯಶ್‌ ತಾಯಿ ನಿರ್ಮಾಣದ ಚಿತ್ರ

ಯಶ್‍ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಪಕರಾಗಿರುವುದು ಗೊತ್ತೇ ಇದೆ. ಪುಷ್ಪಾ ಅವರು ಪಿ.ಎ ಪ್ರೊಡಕ್ಷನ್ಸ್‌ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ, ಈ ನಿರ್ಮಾಣ ಸಂಸ್ಥೆಯಡಿ ‘ಕೊತ್ತಲವಾಡಿ’ (Kothalavadi) ಎಂಬ ಚೊಚ್ಚಲ ಚಿತ್ರ ನಿರ್ಮಿಸಿದ್ದಾರೆ. ಕಳೆದ ತಿಂಗಳು ಈ ಚಿತ್ರದ ಮೊದಲ ಪತ್ರಿಕಾಗೋಷ್ಠಿ ಸಹ ನಡೆದಿದ್ದು, ಚಿತ್ರದ ಬಗ್ಗೆ ಪುಷ್ಪಾ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಆಗಸ್ಟ್ 01ರಂದು ಈ ಚಿತ್ರ ಬಿಡುಗಡೆ ಆಗುತ್ತಿದೆ. ಹಿರಿಯ ನಿರ್ದೇಶಕರಾದ…

Read More

ಹೊಸ ಅವತಾರದಲ್ಲಿ Krishna Ajai Rao, ಹೊಸ ಚಿತ್ರ ಪ್ರಾರಂಭ ಇಂದಿನಿಂದ..

ಅಜೇಯ್‍ ರಾವ್‍ (Krishna Ajai Rao) ಅಭಿನಯದ ‘ಯುದ್ಧಕಾಂಡ’ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಹಾಗಂತ ಅಜೇಯ್‍ ಸುಮ್ಮನಿಲ್ಲ. ಒಂದಿಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದು, ಈ ಪೈಕಿ ಒಂದು ಚಿತ್ರ ಶನಿವಾರ (ಜೂನ್‍ 21) ಪ್ರಾರಂಭವಾಗಲಿದೆ. ಸಾಮಾನ್ಯವಾಗಿ ಲವ್ವರ್‌ ಬಾಯ್‍ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅಜೇಯ್‍ ರಾವ್, ಹೊಸ ಚಿತ್ರದಲ್ಲಿ ತಮ್ಮ ಪಥವನ್ನು ಬದಲಾಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ವಿಭಿನ್ನವಾದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಬೋಳು ತಲೆಯ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ. ಅರ್ಧ…

Read More

‘666 Operation Dream Theatre’ನಲ್ಲಿ ಧನಂಜಯ್‍…

ಶಿವರಾಜಕುಮಾರ್‌ ಅಭಿನಯದಲ್ಲಿ ‘ಭೈರವನ ಕೊನೆಯ ಪಾಠ’ ಎಂಬ ಚಿತ್ರವನ್ನು ಕಳೆದ ವರ್ಷ ಘೋಷಿಸಿದ್ದರು ನಿರ್ದೇಶಕ ಹೇಮಂತ್‍ ರಾವ್. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರವು ಈ ವರ್ಷ ಪ್ರಾರಂಭವಾಗಬೇಕಿತ್ತು. ಆದರೆ, ಶಿವರಾಜಕುಮರ್‌ ಅವರ ಅನಾರೋಗ್ಯದಿಂದ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ. ಅದಕ್ಕೂ ಮೊದಲು ಇನ್ನೊಂದು ಹೊಸ ಚಿತ್ರವನ್ನು ಹೇಮಂತ್‍ ಘೋಷಿಸಿದ್ದಾರೆ. ಈ ಚಿತ್ರದಲ್ಲೂ ಶಿವರಾಜಕುಮಾರ್‌ ನಟಿಸುತ್ತಿದ್ದಾರೆ. ಆದರೆ, ವಿಶೇಷ ಪಾತ್ರದಲ್ಲಿ. ಈ ಚಿತ್ರದಲ್ಲಿ ನಾಯಕನಾಗಿ ಧನಂಜಯ್‍ ಕಾಣಿಸಿಕೊಳ್ಳುತ್ತಿದ್ದು, ಶಿವರಾಜಕುಮಾರ್‌ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹೆಸರು…

Read More

ವಾಣಿಜ್ಯ ಮಂಡಳಿಯಲ್ಲಿ Rachita Ram ಮೇಲೆ ಇನ್ನೊಂದು ದೂರು …

‘ಸಂಜು ವೆಡ್ಸ್ ಗೀತಾ 2’ ಚಿತ್ರದ ಪ್ರಚಾರಕ್ಕೆ ರಚಿತಾ ರಾಮ್‍ (Rachita Ram) ಬರುತ್ತಿಲ್ಲ ಎಂದು ಅವರ ನಿರ್ದೇಶಕ ನಾಗಶೇಖರ್‌ ಇತ್ತೀಚೆಗಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು. ತಮ್ಮ ಚಿತ್ರದ ಪ್ರಚಾರಕ್ಕೆ ರಚಿತಾ ಬರದೇ ಆಟ ಆಡಿಸುತ್ತಿದ್ದಾರೆ ಮತ್ತು ರಚಿತಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಇದೀಗ ರಚಿತಾ ವಿರುದ್ಧ ವಾಣಿಜ್ಯ ಮಂಡಳಿಯಲ್ಲಿ ಇನ್ನೊಂದು ದೂರು ದಾಖಲಾಗಿದೆ. ಕೆಲವು ವರ್ಷಗಳ ಹಿಂದೆ ಉಪೇಂದ್ರ ಮತ್ತು ರಚಿತಾ ರಾಮ್‍ ಅಭಿನಯದಲ್ಲಿ ‘ಉಪ್ಪಿ ರುಪ್ಪಿ’ ಎಂಬ…

Read More