
Naa Ninna Bidalaare; ಕಿರುತೆರೆಗೆ ಮರಳಿದ ನೀತಾ ಅಶೋಕ್; ಇದೇ 27 ರಿಂದ ಥ್ರಿಲ್ಲರ್ ಸಿರಿಯಲ್ ʻನಾ ನಿನ್ನ ಬಿಡಲಾರೆʼ
Naa Ninna Bidalaare Serial: ಥ್ರಿಲ್ಲರ್, ಹಾರರ್ ಮತ್ತು ಅಮ್ಮ-ಮಗಳ ಬಾಂಧವ್ಯದ ಎಲ್ಲಾ ವಯೋಮಾನದವರ ಮೆಚ್ಚಗೆಗೆ ಪಾತ್ರವಾಗುವಂತಹ ಧಾರಾವಾಹಿಯನ್ನು ಜೀ ಕನ್ನಡ ತರುತ್ತಿದೆ. ತಿಂಗಳ ಕೊನೆಯ ವಾರದಿಂದ (ಜನವರಿ 27) ‘ನಾ ನಿನ್ನ ಬಿಡಲಾರೆ’ ಎಂಬ ಶೀರ್ಷಿಕೆಯುಳ್ಳ ಧಾರಾವಾಹಿ ಪ್ರಸಾರ ಆಗಲಿದೆ. ಈ ಧಾರಾವಾಹಿಯ ಮೊದಲ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆದಿದೆ. ಶರತ್- ಅಂಬಿಕಾ ದಂಪತಿಗೆ ಮಗಳು ಹಿತ. ಈ ದಾಂಪತ್ಯದ ಮೇಲೆ ಮಾಯಾಳ ಕಣ್ಣು ಬಿಳುತ್ತದೆ, ಶರತ್ನನ್ನು ತನ್ನವನನ್ನಾಗಿಸಿಕೊಳ್ಳಬೇಕೆಂಬ ದುರಾಸೆಗೆ ಬಿದ್ದ ಮಾಯಾ ಅಂಬಿಕಾಳನ್ನು…