
Golden Star Ganesh; ಇದುವರೆಗೂ ಮಾಡದ ವಿಭಿನ್ನ ಪಾತ್ರದಲ್ಲಿ ಗಣೇಶ್; ಯಾವ ಪಾತ್ರ ಅದು?
ಗಣೇಶ್ ಚಿತ್ರಗಳೆಂದರೆ ಅದೇ ರೊಮ್ಯಾಂಟಿಕ್ ಕಾಮಿಡಿಗಳು, ಒಂದೇ ತರಹದ ವಿಭಿನ್ನ ಹೆಸರಿನ ಚಿತ್ರಗಳು ಎಂದು ಹಣೆಪಟ್ಟಿ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಗಣೇಶ್ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಬೇರೆ ತರಹದ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಪಿನಾಕ’ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಗಣೇಶ್ (golden star ganesh) ಹೇಳಿಕೊಂಡಿದ್ದರು. ಈಗ ಹೊಸ ಚಿತ್ರದಲ್ಲೂ ಇದುವರೆಗೂ ಮಾಡದ ಒಂದು ವಿಭಿನ್ನ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಗಣೇಶ್ ಹೇಳಿಕೊಂಡಿದ್ದಾರೆ. ಅಂದಹಾಗೆ, ಗಣೇಶ್ ಅಭಿನಯದ ಹೊಸ ಚಿತ್ರ ಭಾನುವಾರ ಸೆಟ್ಟೇರಿದೆ. ಅರಸು…