
Megastar Chiranjeevi; ಒಂದೂವರೆ ವರ್ಷಗಳ ನಂತರ ಸೆಟ್ಟೇರಿತು ಚಿರಂಜೀವಿ ಹೊಸ ಸಿನಿಮಾ
ಚಿರಂಜೀವಿ (Megastar Chiranjeevi) ಅಭಿನಯದ ಚಿತ್ರವೊಂದು ಸೆಟಟೇರಿ ಒಂದೂವರೆ ವರ್ಷಗಳೇ ಆಗಿವೆ. 2023ರ ಆಗಸ್ಟ್ ತಿಂಗಳಲ್ಲಿ ಅವರ ‘ವಿಶ್ವಂಭರ’ ಚಿತ್ರವು ಸೆಟ್ಟೇರಿತ್ತು. ಆ ಚಿತ್ರ ಈ ವರ್ಷದ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತಾದರೂ, ಕಾರಣಾಂತರಗಳಿಂದ ತಡವಾಗಿ ಚಿತ್ರ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರವನ್ನು ಜುಲೈ 24ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದ್ದು, ಒಂದು ಪಕ್ಷ ಚಿತ್ರ ಇನ್ನೂ ತಡವಾದರೆ, ಚಿರಂಜೀವಿ ಹುಟ್ಟುಹಬ್ಬದ ಸಂದರ್ಭದಲ್ಲಿ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ….