
ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು …
ಈ ಚಿತ್ರ ಯಾವಾಗ ಶುರುವಾಗಿದ್ದು ಗೊತ್ತಿಲ್ಲ. ಮುಗಿದಿದ್ದು ಯಾವಾಗ ಗೊತ್ತಿಲ್ಲ. ಆ ಬಗ್ಗೆ ಚಿತ್ರತಂಡದವರು ಮಾತನಾಡುವುದಿಲ್ಲ. ಆದರೆ, ಚಿತ್ರದ ಪೋಸ್ಟರ್ ನೋಡಿದರೆ ಕನಿಷ್ಠ ಎಂಟ್ಹತ್ತು ವರ್ಷಗಳ ಹಿಂದಿನಿದಿರಬಹುದು ಎಂಬ ಸಂಶಯ ಬರುತ್ತದೆ. ಅದಕ್ಕೆ ಸರಿಯಾಗಿ, ಅನಂತ್ ನಾಗ್ ಮತ್ತು ಲಕ್ಷ್ಮೀ ಈ ಚಿತ್ರದಲ್ಲಿ ನಟಿಸಿದ್ದಾರೆ. ಇಬ್ಬರೂ ಇತ್ತೀಚೆಗೆ ಜೊತೆಯಾಗಿ ನಟಿಸಿರುವ ಸುದ್ದಿ ಇಲ್ಲ. ಶರಣ್ ಅವರನ್ನು ನೋಡಿದರೆ ಅವರು ಹೀರೋ ಆಗುವುದಕ್ಕಿಂತ ಮೊದಲು ನಟಿಸಿರಬಹುದಾದ ಚಿತ್ರ ಎಂದನಿಸುತ್ತಿದೆ. ಚಿತ್ರ ಯಾವಾಗ ಶುರುವಾಯಿತೋ ಗೊತ್ತಿಲ್ಲ. ಈಗ ಬಿಡುಗಡೆಯಾಗುವುದಕ್ಕಂತೂ ಸಜ್ಜಾಗಿದೆ….