Ganesh; ಗಣೇಶ್‍ ಹೊಸ ಚಿತ್ರಕ್ಕೆ ‘ಹನು ಮ್ಯಾನ್’ ಖ್ಯಾತಿಯ ಅಮೃತ ಅಯ್ಯರ್ ನಾಯಕಿ

ಸದ್ಯ ‘ಯುರ್ಸ್ ಸಿನ್ಸಿಯರ್ಲಿ ರಾಮ್‍’ ಮತ್ತು ‘ಪಿನಾಕ’ ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ಗಣೇಶ್‍, ಇದೀಗ ಹೊಸ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಗೀತರಚನೆಕಾರ ಮತ್ತು ಈ ಹಿಂದೆ `ಲವ್ ಇನ್ ಮಂಡ್ಯ’ ಚಿತ್ರವನ್ನು ನಿರ್ದೇಶಿಸಿದ್ದ ಅರಸು ಅಂತಾರೆ ನಿರ್ದೇಶನದ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. 2014ರಲ್ಲಿ ಬಿಡುಗಡೆಯಾದ ‘ಲವ್‍ ಇನ್ ಮಂಡ್ಯ’ ಚಿತ್ರದ ನಂತರ ಅರಸು ಅಂತಾರೆ ಯಾವೊಂದು ಚಿತ್ರವನ್ನೂ ನಿರ್ದೇಶನ ಮಾಡಿರಲಿಲ್ಲ. ಹಲವು ಚಿತ್ರಗಳಿಗೆ ಹಾಡುಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದ ಅರಸು, ಇದೀಗ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಈ ಚಿತ್ರದಲ್ಲಿ ಗಣೇಶ್‍…

Read More