
Vinay Rajkumar ; ನಿರ್ದೇಶಕರಾದ ವಿನಯ್ ರಾಜಕುಮಾರ್; ಮಾರ್ಚ್‍ನಲ್ಲಿ ‘ಅಂದೊಂದಿತ್ತು ಕಾಲ‘
ನಟರಾಗಿದ್ದ ವಿನಯ್ ರಾಜ್‌ಕುಮಾರ್ (Vinay Rajkumar) ಇದೀಗ ನಿರ್ದೇಶಕರಾಗಿದ್ದಾರೆ. ಹಾಗಂತ ರಿಯಲ್ ಲೈಫ್‍ನಲ್ಲಿ ಅಲ್ಲ, ಚಿತ್ರವೊಂದರಲ್ಲಿ ಅವರು ನಿರ್ದೇಶಕನ ಪಾತ್ರ ಮಾಡಿದ್ದಾರೆ. ಅದೇ ‘ಅಂದೊಂದಿತ್ತು ಕಾಲ’. ಕೀರ್ತಿ ಕೃಷ್ಣ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವು ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ‘ಅಂದೊಂದಿತ್ತು ಕಾಲ’ (Andondittu Kaala) ಚಿತ್ರದ ‘ಮುಂಗಾರು ಮಳೆಯಲ್ಲಿ …’ (Mungaru Maleyalli) ಎಂಬ ಹಾಡು ಕೆಲವು ದಿನಗಳ ಹಿಂದೆ ಗಣೇಶ್ (Ganesh) ಮತ್ತು…