
Vinodh Rajkumar; ಲೀಲಾವತಿ ಸ್ಮಾರಕ ಭವನದಲ್ಲಿ ‘ಶಾಲೆ’ ಪ್ರಾರಂಭ
ಕಳೆದ ತಿಂಗಳು ನಟಿ ಲೀಲಾವತಿ ಅವರ ಸ್ಮಾರಕ ಉದ್ಘಾಟನೆಯಾಗಿದ್ದು ನೆನಪಿರಬಹುದು. ಸೋಲದೇವನಹಳ್ಳಿಯ ತಮ್ಮ ಜಮೀನಿನಲ್ಲಿ ತಾಯಿಯ ಸ್ಮಾರಣಾರ್ಥ ಈ ಸ್ಮಾರಕವನ್ನು ವಿನೋದ್ ರಾಜ್ ಕಟ್ಟಿಸಿದ್ದಾರೆ. ಈಗ ಡಾ. ಲೀಲಾವತಿ ಸ್ಮಾರಕ ಭವನದಲ್ಲಿ ಸದ್ದಿಲ್ಲದೆ ಒಂದು ಚಿತ್ರದ ಮುಹೂರ್ತ ನೆರವೇರಿದೆ. ಅದೇ ‘ಶಾಲೆ’. ಶ್ರೀ ಕನ್ನಡಾಂಬೆ ಮೂವೀಸ್ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಬಿ.ಆರ್ ನಿರ್ದೇಶಿಸುತ್ತಿರುವ, ನಾಗು ಶ್ರೀ ಎಸ್.ಎನ್. ನಿರ್ಮಾಣದ ಚಿತ್ರ ‘ಶಾಲೆ’. ಈ ಚಿತ್ರದ ಮುಹೂರ್ತ ಲೀಲಾವತಿ ಸ್ಮಾರಕದಲ್ಲಿ ನಡೆದಿದ್ದು, ಚಿತ್ರದ ಮೊದಲ ದೃಶ್ಯಕ್ಕೆ ವಿನೋದ್ ರಾಜ್…