
ನಾಯಕ ವಿಷ್ಣು, ನಾಯಕಿ ಪ್ರಿಯಾ; ಫೆ. 21ಕ್ಕೆ ‘ವಿಷ್ಣು ಪ್ರಿಯ’
ಬಹಳ ಸಮಯದಿಂದ ಬಿಡುಗಡೆಗೆ ಕಾದಿದ್ದ ಕೆ. ಮಂಜು ಮಗ ಶ್ರೇಯಸ್ ಮಂಜು ಅಭಿನಯದ ‘ವಿಷ್ಣು ಪ್ರಿಯ’ ಚಿತ್ರಕ್ಕೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಚಿತ್ರವು ಫೆಬ್ರವರಿ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘ವಿಷ್ಣುಪ್ರಿಯ’ ಚಿತ್ರವು 2019ರಲ್ಲಿ ಪ್ರಾರಂಭವಾಗಿತ್ತು. ಚಿತ್ರೀಕರಣ ಪ್ರಾರಂಭವಾಗಿ ಒಂದಿಷ್ಟು ಮುಗಿಯುವಷ್ಟರಲ್ಲಿ ಕೋವಿಡ್ ಲಾಕ್ಡೌನ್ ಶುರುವಾಯಿತು. 2021ರಲ್ಲಿ ಈ ಚಿತ್ರದ ಟೀಸರನ್ನು ಪುನೀತಾ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಆ ನಂತರ ಚಿತ್ರ ಸಂಪೂರ್ಣವಾದರ, ಕಾರಣಾಂತರಗಳಿಂದ ಬಿಡುಗಡೆಯಾಗಿರಲಿಲ್ಲ. ಈಗ ಕೊನೆಗೂ ಚಿತ್ರದ ಬಿಡುಗಡೆಗೆ ಮುಹೂರ್ತ ಸಿಕ್ಕಿದೆ. 90ರ ಕಾಲಘಟ್ಟದ…