
ಸದ್ಯ ಓಟಿಟಿಯಲ್ಲಿ ‘UI’ ಇಲ್ಲ; ಸ್ಪಷ್ಟನೆ ಕೊಟ್ಟ ನಿರ್ಮಾಪಕರು
ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವು ಡಿಸೆಂಬರ್ 20ರಂದು ಬಿಡುಗಡೆಯಾಗಿ, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಮಧ್ಯೆ, ಚಿತ್ರವು ಸದ್ಯದಲ್ಲೇ ಸನ್ ನೆಕ್ಸ್ಟ್ ಓಟಿಟಿಯಲ್ಲಿ ಪ್ರಸಾರವಾಗಲಿದೆ ಎಂಬ ಸುದ್ದಿಯೊಂದು ಓಟಿಟಿಯಲ್ಲಿ ಕೇಳಿಬಂದಿತ್ತು. ಆದರೆ, ಈ ಸುದ್ದಿ ಸುಳ್ಳು ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ಕೊಟ್ಟಿರುವ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕೆ.ಪಿ. ಶ್ರೀಕಾಂತ್, ‘ಚಿತ್ರದ ೋಟಿಟಿ ಹಕ್ಕುಗಳನ್ನು ಸನ್ ನೆಕ್ಸ್ಟ್ ಸಂಸ್ಥೆಯು ಖರೀದಿಸಿದೆ ಮತ್ತು ಚಿತ್ರವು ಸದ್ಯದಲ್ಲೇ, ಆ ಓಟಿಟಿಯಲ್ಲಿ ಸ್ಟ್ರೀಮ್…