
ಇದು ಕುರ್ಚಿಯ ಕುರಿತಾದ ಟೀಸರ್; ‘ಕರಾವಳಿ’ಯಿಂದ ಬಂತು ‘ಪಿಶಾಚಿ’
ಸಾಮಾನ್ಯವಾಗಿ ಟೀಸರ್ಗಳು ನಾಯಕ, ನಾಯಕಿ ಅಥವಾ ಸಿನಿಮಾದ ಒಬ್ಬ ವ್ಯಕ್ತಿಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದರೆ, ‘ಕರಾವಳಿ’ ಚಿತ್ರತಂಡದವರು ಒಂದು ಕುರ್ಚಿಯ ಕುರಿತು ಟೀಸರ್ ಮಾಡಿದ್ದಾರೆ. ಕುರ್ಚಿ ಎಂದರೆ ಇದು ಸಾಮಾನ್ಯ ಕುರ್ಚಿಯಲ್ಲ. ಇದನ್ನು ಚಿತ್ರತಂಡದವರು ಪಿಶಾಚಿಗೆ ಹೋಲಿಸಿದ್ದಾರೆ. ಇತ್ತೀಚೆಗೆ, ಹೊಸ ವರ್ಷದ ಸಂದರ್ಭದಲ್ಲಿ ಈ ‘ಪಿಶಾಚಿ’ಯ ಕುರಿತು ‘ಕರಾವಳಿ’ ಚಿತ್ರತಂಡ ಒಂದು ಹೊಸ ಟೀಸರ್ ಬಿಡುಗಡೆ ಮಾಡಿದ್ದಾರೆ. ಇದು ಬರಿ ಕುರ್ಚಿಯಲ್ಲ, ಪ್ರತಿಷ್ಠೆಯ ಪಿಚಾಚಿ ಎನ್ನುವ ಸಂಭಾಷಣೆಯಿಂದ ಟೀಸರ್ ಪ್ರಾರಂಭವಾಗುತ್ತದೆ. ಪ್ರತಿಷ್ಠೆಯ ಕುರ್ಚಿ ಮೇಲೆ ಕೂರುವುದಿರಲಿ, ಕಣ್ಣಿಟ್ಟವರನ್ನು…