
Vaghachipani; ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ವಾಘಚಿಪಾಣಿ’ ಆಯ್ಕೆ; ಕನ್ನಡಕ್ಕೆ ಇದೇ ಮೊದಲು
ಬೆಂಗಳೂರು: 75ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ಕನ್ನಡದ ‘ವಾಘಚಿಪಾಣಿ’ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಐದು ಖಂಡಗಳ 30 ಸಿನಿಮಾಗಳಲ್ಲಿ ‘ವಾಘಚಿಪಾಣಿ’ ಒಂದಾಗಿದ್ದು, ಕನ್ನಡದ ಮೊದಲ ಸಿನಿಮಾವಾಗಿದೆ. ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಫೆಬ್ರವರಿ 13 ರಿಂದ 23ರವರೆಗೂ ನಡೆಯಲಿದೆ. ‘ವಾಘಚಿಪಾನಿ’ ನಟೇಶ್ ಹೆಗ್ಡೆಯವರ ಎರಡನೇ ಚಿತ್ರವಾಗಿದ್ದು, ಮೊದಲ ಚಲನಚಿತ್ರ, ‘ಪೆಡ್ರೋ’ ಕ್ಯಾನ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದಿತ್ತು. ಪೆಡ್ರೋವನ್ನು ರಿಷಭ್ ಶೆಟ್ಟಿ ನಿರ್ಮಿಸಿದ್ದರು. ರಿಷಬ್ ಶೆಟ್ಟಿ ನಿರ್ಮಾಣ…