ಯಶ್‍ ನಟನೆಯ ‘ಟಾಕ್ಸಿಕ್’ ಚಿತ್ರದಲ್ಲಿ ರುಕ್ಮಿಣಿ ವಸಂತ್‍?

ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರದ ಚಿತ್ರೀಕರಣ ಕಳೆದ ಕೆಲವು ತಿಂಗಳುಗಳಿಂದ ಭರದಿಂದ ಸಾಗಿದೆ. ಇದೀಗ ಚಿತ್ರದ ಕುರಿತು ಇನ್ನೊಂದು ಸುದ್ದಿ ಬಂದಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ದೊಡ್ಡ ಹೆಸರು ಮಾಡಿದ ರುಕ್ಮಿಣಿ ವಸಂತ್‍, ಈ ಚಿತ್ರದಲ್ಲೊಂದು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ. ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರದಲ್ಲಿ ರುಕ್ಮಿಣಿ ವಸಂತ್‍ ನಟಿಸುತ್ತಿದ್ದಾರೆ ಎಂಬ ಸುದ್ದಿ ಕಳೆದ ವರ್ಷ ಕೇಳಿಬಂದಿತ್ತು. ಆ ಸುದ್ದಿ ಇತ್ತೀಚೆಗೆ ನಿಜವಾಗಿದೆ. ಸ್ವತಃ ಚಿತ್ರತಂಡದವರೇ, ಚಿತ್ರದಲ್ಲಿ ರುಕ್ಮಿಣಿ ವಸಂತ್‍…

Read More
Toxic-Release-Date

ರಾಮಾಚಾರಿ ಬರ್ತ್‌ಡೇಗೆ ಟಾಕ್ಸಿಕ್‌ನಿಂದ ವಿಶೇಷ ಕೊಡುಗೆ..! 

ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರದ ಚಿತ್ರೀಕರಣ ಬೆಂಗಳೂರಿನ ನಂತರ ಮುಂಬೈನಲ್ಲಿ ಮುಂದುವರೆದಿದೆ. ಈ ಮಧ್ಯೆ, ಯಶ್ ತಮ್ಮ ಹುಟ್ಟುಹಬ್ಬವನ್ನು ಬುಧವಾರ (ಜನವರಿ 08) ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದಿಂದ ಒಂದು ಆಶ್ಚರ್ಯ ಕಾದಿದಿಯಂತೆ. ಹಾಗಂತ ಸ್ವತಃ ಯಶ್‍ ಘೋಷಿಸಿದ್ದಾರೆ. ಇಂದು ಸೋಷಿಯಲ್‍ ಮೀಡಿಯಾದಲ್ಲಿ ಹೊಸ ಪೋಸ್ಟರ್‍ ಬಿಡುಗಡೆ ಮಾಡಿರುವ ಅವರು, 08ರಂದು ಒಂದು ಆಶ್ಚರ್ಯ ಕಾದಿದೆ ಎಂದು ಹೇಳಿದ್ದಾರೆ. ಆದರೆ, ಆ ಆಶ್ಚರ್ಯವೇನು ಎಂಬುದನ್ನು ಅವರು ಬಹಿರಂಗಗೊಳಿಸಿಲ್ಲ. ‘Unleashing him’ ಎಂದಷ್ಟೇ ಬರೆದುಕೊಂಡಿದ್ದಾರೆ. ಸರಿಯಾಗಿ ಒಂದು ವರ್ಷದ…

Read More