
Game Changer; ತೆಲುಗಿನ ‘ಗೇಮ್ ಚೇಂಜರ್’ನಿಂದ ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ
ದೊಡ್ಡ ಬಜೆಟ್ನ ಮತ್ತು ಬಹುನಿರೀಕ್ಷೆಯ ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆ ಆದಾಗಲೆಲ್ಲಾ, ಕನ್ನಡ ಚಿತ್ರಗಳಿಗೆ ಸಮಸ್ಯೆ ಎದುರಾಗುತ್ತದೆ. ಇದೀಗ ರಾಮ್ಚರಣ್ ತೇಜ ಅಭಿನಯದ ‘ಗೇಮ್ ಚೇಂಜರ್’ ಚಿತ್ರದಿಂದ ತಮಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂದು ‘ಛೂ ಮಂತರ್’ ನಿರ್ಮಾಪಕ ತರುಣ್ ಶಿವಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಇಂದು ಶರಣ್ ಅಭಿನಯದ ‘ಛೂ ಮಂತರ್’, ‘ಟೆಡ್ಡಿ ಬೇರ್’ ಮತ್ತು ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇದರ ಜೊತೆಗೆ ತೆಲುಗಿನ ನಿರೀಕ್ಷಿತ ಚಿತ್ರವಾದ ರಾಮ್ಚರಣ್…