ಐದು ದಿನಗಳಲ್ಲಿ 13 ಕೋಟಿ ಬಾಚಿದ ‘Su From So’

ಯಾವದೇ ಪ್ರಚಾರವಿಲ್ಲದೆ ಬಿಡುಗಡೆಯಾದ ‘ಸು ಫ್ರಮ್‍ ಸೋ’ (Su From So) ಚಿತ್ರವು ಇಷ್ಟು ದೊಡ್ಡ ಹಿಟ್‍ ಆಗಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಯಾವುದೇ ದೊಡ್ಡ ಬಜೆಟ್‍ನ ಮತ್ತು ಜನಪ್ರಿಯ ನಟರ ಚಿತ್ರಗಳು ಮಾಡದ ಸಾಧನೆಯನ್ನು ಹೊಸಬರ ಚಿತ್ರವೊಂದು ಮಾಡಿ, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ.

ಜುಲೈ 25ರಂದು ಬಿಡುಗಡೆಯಾದ ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಚಿತ್ರವು ಕಳೆದ ಐದು ದಿನಗಳಲ್ಲಿ 13 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಸಂಪೂರ್ಣ ಹೊಸಬರ ತಂಡವೊಂದು ಮಾಡಿದ ಚಿತ್ರವೊಂದು ಈ ರೀತಿಯ ಗಳಿಕೆ ಮಾಡುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು. ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ‘ಸು ಫ್ರಮ್‍ ಸೋ’ ಚಿತ್ರವು, ಈ ರೀತಿ ದೊಡ್ಡ ಗಳಿಕೆ ಮಾಡುತ್ತಿರುವುದು ಹಲವರ ಹುಬ್ಬೇರಿಸಿದೆ.

‘ಸು ಫ್ರಮ್ ಸೋ’ ಚಿತ್ರದ ಗಳಿಕೆ ಶುಕ್ರವಾರದಿಂದ ನಿರಂತವಾಗಿ ಏರುತ್ತಲೇ ಇದೆ. ಮೊದಲ ದಿನ ರಾಜ್ಯಾದ್ಯಂತ ಚಿತ್ರ 88 ಲಕ್ಷ ರೂ.ಗಳ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಎರಡನೇ ದಿನ 2.17, ಮೂರನೇ ದಿನ 3.5, ನಾಲ್ಕನೇ ದಿನ 3.05 ಹಾಗೂ ಐದನೇ ದಿನ 3.88 ಕೋಟಿ ರೂ ಗಳಿಕೆ ಮಾಡಿರುವ ಸುದ್ದಿ ಇದೆ. ಒಟ್ಟಾರೆ ಚಿತ್ರವು ಐದು ದಿನಗಳಲ್ಲಿ 13 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಆಗಿದ್ದು, ಕಡಿಮೆ ಬಜೆಟ್‍ನಲ್ಲಿ ನಿರ್ಮಾಣ ಮಾಡಿದ್ದ ಚಿತ್ರತಂಡ, ದೊಡ್ಡ ಲಾಭ ಪಡೆಯಲಿದೆ ಎಂದು ಹೇಳಲಾಗುತ್ತದೆ. ‘ಸು ಫ್ರಮ್‍ ಸೋ’ ಚಿತ್ರವು ಸದ್ಯ ಬೆಂಗಳೂರಿನಲ್ಲೇ 200ಕ್ಕೂ ಹೆಚ್ಚು ಪ್ರದರ್ಶನಗಳು ಕಾಣುತ್ತಿದೆ.

ಈ ಮಧ್ಯೆ, ಚಿತ್ರದ ಮಲಯಾಳಂ ಅವತರಣಿಕೆಯು ಆಗಸ್ಟ್ 01ರಂದು ಬಿಡುಗಡೆಯಾಗುತ್ತಿದ್ದು, ಹಿಂದಿ ಡಬ್ಬಿಂಗ್‍ ಹಕ್ಕುಗಳು ಸಹ ಮಾರಾಟವಾಗಿವೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಜನಪ್ರಿಯ ವಿತರಕ ಮತ್ತು ರವೀನಾ ಟಂಡನ್‍ ಗಂಡ ಅನಿಲ್‍ ಥಡಾನಿ, ಈ ಚಿತ್ರದ ಹಿಂದಿ ಹಕ್ಕುಗಳನ್ನು ಖರೀದಿಸಿದ್ದು, ಅದನ್ನು ಹಿಂದಿಗೆ ಡಬ್‍ ಮಾಡಿ ಉತ್ತರ ಭಾರತದಲ್ಲಿ ಬಿಡುಗಡೆ ಮಾಡುತವುದಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

‘ಸು ಫ್ರಮ್ ಸೋ’ ಚಿತ್ರದಲ್ಲಿ ರಾಜ್‍ ಬಿ. ಶೆಟ್ಟಿ, ಜೆ.ಪಿ. ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಜೆ.ಪಿ. ತುಮಿನಾಡು ನಿರ್ದೇಶನ ಮಾಡಿದ್ದು, ಲೈಟರ್‌ ಬುದ್ಧ ಫಿಲ್ಮ್ಸ್ ನಿರ್ಮಾಣ ಮಾಡಿದೆ.


ಇದನ್ನೂ ಓದಿ:-


ನೋಡಲು ಕಿರುಗಥೆ ಇಲ್ಲಿದೆ..


ಹೆಚ್ಚಿನ ಓದು ಇಲ್ಲಿದೆ..

Leave a Reply

Your email address will not be published. Required fields are marked *

ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ ಕನ್ನಡಕ್ಕೆ ವಾಪಸ್ಸಾದ ‘ಜಿಂಕೆ ಮರಿ’ಯ ನಂದಿತಾ ಶ್ವೇತಾ ಮಗಳ ಜೊತೆ ಮಿಲನಾ ನಾಗರಾಜ್‌