ಒಂದು ವಾರದಲ್ಲಿ 18 ಕೋಟಿ ರೂ ಗಳಿಕೆ ಮಾಡಿದ ‘Su From So’

ಕನ್ನಡ ಚಿತ್ರವೊಂದು ಈ ರೀತಿಯ ಪ್ರದರ್ಶನ ಮತ್ತು ಗಳಿಕೆ ಕಂಡು ಸಾಕಷ್ಟು ದಿನಗಳಾಗಿದ್ದವು. ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಹೌಸ್‍ಫುಲ್ ಪ್ರದರ್ಶನ ಕಾಣುವುದರ ಜೊತೆಗೆ, ಮೊದಲ ವಾರ 20 ಕೋಟಿ ರೂ.ಗಳಿಗೆ ಹೆಚ್ಚು ಗಳಿಕೆ ಮಾಡಿತ್ತು. ಆ ನಂತರ ಯಾವೊಂದು ಚಿತ್ರ ಸಹ ಅಷ್ಟೊಂದು ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿರಲಿಲ್ಲ.
ಕಳೆದ ಶುಕ್ರವಾರ ಬಿಡುಗಡೆಯಾದ ‘Su From So’ ಚಿತ್ರವು ಮೊದಲ ವಾರ ಕರ್ನಾಟಕದಲ್ಲಿ ಒಟ್ಟಾರೆ 18 ಕೋಟಿ ರೂ. ಗಳಿಸಿದೆ. ಕನ್ನಡ ಚಿತ್ರಗಳು ಮೊದಲ ವಾರ ಇಷ್ಟು ಗಳಿಕೆ ಮಾಡುವುದು ಹೊಸ ವಿಷಯವೇನಲ್ಲ. ಆದರೆ, ಹೊಸಬರ ತಂಡವೊಂದು ಮಾಡಿದ ಚಿತ್ರವೊಂದು ಇಷ್ಟೊಂದು ಹಣ ಗಳಿಕೆ ಮಾಡಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು. ಆ ನಿಟ್ಟಿನಲ್ಲಿ ‘ಸು ಫ್ರಮ್ ಸೋ’ ಚಿತ್ರ ಹೊಸ ದಾಖಲೆಯನನ್ನೇ ಮಾಡಿದೆ.
ಹೆಚ್ಚು ಪ್ರಚಾರವಿಲ್ಲದೆ ಬಿಡುಗಡೆಯಾದ ‘Su From So’ ಮೊದಲ ದಿನ ಹೆಚ್ಚು ಗಳಿಕೆ ಮಾಡಿರಲಿಲ್ಲ. ಮೊದಲ ದಿನ ರಾಜ್ಯಾದ್ಯಂತ ಚಿತ್ರ 88 ಲಕ್ಷ ರೂ.ಗಳ ಗಳಿಕೆ ಮಾಡಿದ್ದು, ನಂತರದ ದಿನಗಳಲ್ಲಿ ಗಳಿಕೆ ಕ್ರಮೇಣ ಏರಿದೆ. ಒಟ್ಟಾರೆ ಐದು ದಿನಗಳಲ್ಲಿ ಚಿತ್ರವು 13 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಆಗಿದ್ದು, ಮೊದಲ ವಾರದ ಅಂತ್ಯಕ್ಕೆ ಚಿತ್ರವು 18 ಕೋಟಿ ರೂ. ಗಳಿಕೆ ಮಾಡಿದೆ. ಚಿತ್ರವು ಮಲಯಾಳಂ ಭಾಷೆಗೆ ಡಬ್ ಆಗಿದ್ದು, ಆಗಸ್ಟ್ 01ರಂದು ಕೇರಳದಲ್ಲಿ ಬಿಡುಗಡೆಯಾಗಿದೆ. ಮಲಯಾಳಂನ ಜಜನಪ್ರಿಯ ನಟ ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲ್ಮ್ಸ್ ಸಂಸ್ಥೆಯು ಚಿತ್ರವನ್ನು ಕೇರಳದಲ್ಲಿ ಬಿಡುಗಡೆ ಮಾಡಿದೆ.
‘Su From So’ ಚಿತ್ರದಲ್ಲಿ ಜೆ.ಪಿ. ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಬೆಳ್ತಂಗಡಿ, ವೇಣೂರು, ಕಕ್ಯಪದವು ಸುತ್ತಮುತ್ತ 50ದಿನಗಳ ಚಿತ್ರೀಕರಣ ಈ ಚಿತ್ರಕ್ಕೆ ನಡೆದಿದೆ.
‘ಸು ಫ್ರಮ್ ಸೋ’ ಚಿತ್ರವನ್ನು ರಾಜ್ ಬಿ. ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಜೆ.ಪಿ. ತುಮಿನಾಡು ಕಥೆ-ಚಿತ್ರಕಥೆ ಬರೆದು ನಿರ್ದೇಣ ಮಾಡಿದ್ದಾರೆ. ಚಂದ್ರಶೇಖರ್ ಅವರ ಛಾಯಾಗ್ರಹಣ, ಸುಮೇಧ್ ಕೆ ಅವರ ಸಂಗೀತ ಈ ಚಿತ್ರಕ್ಕಿದೆ.
ಇದನ್ನೂ ಓದಿ :-
ಹೆಚ್ಚಿನ ಓದಿಗಾಗಿ :-
deca supplement References: buketik39.ru
difference between anabolic and androgenic References: https://lovebookmark.win/story.php?title=steroids-and-hyperglycemia-unpacking-their-intricate-link
corticosteroids vs anabolic steroids References: maps.google.com.br
legal cutting steroids References: www.tikosatis.com
steroids to lose weight and get cut References: www.google.mn
Reading about game strategy really highlights how much mental fortitude is key. It’s not just luck, but calculated risks-like finding a solid platform. Considering a move towards og777 vip for a more curated experience, focusing on responsible play, of course!