Moda Kavida Vaathavarana; ಸದ್ದಿಲ್ಲದೆ ಇನ್ನೊಂದು ಚಿತ್ರ ಮುಗಿಸಿದ ‘ಸಿಂಪಲ್’ ಸುನಿ …

ಕನ್ನಡದ ಅತ್ಯಂತ ಬ್ಯುಸಿ ನಿರ್ದೇಶಕರೆಂದರೆ ಅದು ‘ಸಿಂಪಲ್’ ಸುನಿ. ಸದ್ಯ ಅವರ ಕೈಯಲ್ಲಿ ಮೂರು ಚಿತ್ರಗಳಿವೆ. ಈಗಾಗಲೇ ‘ಗತವೈಭವ’ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಗೆ ಅಣಿಯಾಗುತ್ತಿದ್ದರೆ, ‘ದೇವರು ರುಜು ಮಾಡಿದನು’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಈ ಮಧ್ಯೆ, ‘ಮೋಡ ಕವಿದ ವಾತಾವರಣ’ (Moda Kavida Vaathavarana) ಎಂಬ ಹೊಸ ಚಿತ್ರದ ಚಿತ್ರೀಕರಣವನ್ನು ಅವರು ಸದ್ದಿಲ್ಲದೆ ಮುಗಿಸಿದ್ದಾರೆ.
‘ಮೋಡ ಕವಿದ ವಾತಾವರಣʼ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಮುಗಿದಿದೆ. ಸೈನ್ಸ್ ಫಿಕ್ಷನ್ ಕಥಾಹಂದರ ಹೊಂದಿರುವ ಚಿತ್ರವನ್ನು ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್ ಮೂವೀಸ್ ಈ ಸಿನಿಮಾ ನಿರ್ಮಾಣ ಮಾಡಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ.

ಈ ಚಿತ್ರದ ಮೂಲಕ ಸುನಿ, ಕನ್ನಡ ಚಿತ್ರರಂಗಕ್ಕೆ ಶಿವಂ ಎಂಬ ಹೊಸ ಹೀರೋನನ್ನು ಪರಿಚಯಿಸುತ್ತಿದ್ದಾರೆ. ಶಿವಂಗೆ ನಾಯಕಿಯಾಗಿ ಶ್ರಾವ್ಯ ಅಲಿಯಾಸ್ ಸಾತ್ವಿಕಾ ನಟಿಸುತ್ತಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಸುನಿ, ‘ಶಿವಂ, 2014ರಿಂದ ನನ್ನ ಎಲ್ಲಾ ಚಿತ್ರಗಳಲ್ಲೂ ಒಂದಲ್ಲ ಒಂದು ರೀತಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರು ಬಂದಿದ್ದು ನಟನಾಗಬೇಕು ಎಂದು. ಆದರೆ, ನಿರ್ದೇಶನ, ಮಾರ್ಕೆಟಿಂಗ್ ಸೇರಿದಂತೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡಿದ್ದು. ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಅವರ ಮನೆ ದೇವರು ಶ್ರೀಶೈಲಂ. ಅದಕ್ಕೆ ಅವರಿಗೆ ಶೀಲಂ ಎಂದು ಹೆಸರಿಟ್ಟಿದ್ದಾರೆ’ ಎಂದರು.
ಇನ್ನು, ಮೂರ್ಮೂರು ಚಿತ್ರಗಳಿಗೆ ಒಟ್ಟಿಗೆ ಕೆಲಸ ಮಾಡುವುದು ಕಷ್ಟವಾಗುವುದಿಲ್ಲವಾ? ಯಾವ ಚಿತ್ರ ಕೈಹಿಡಿಯುತ್ತದೆ, ಕೈಕೊಡುತ್ತದೆ ಗೊತ್ತಿಲ್ಲ. ಹಾಗಾಗಿ, ಚಿತ್ರಗಳನ್ನು ಮಾಡುತ್ತಿರಬೇಕು. ‘ಗತ ವೈಭವ’ ಪಂಚವಾರ್ಷಿಕ ಯೋಜನೆ. ಅದಕ್ಕೆ ಆದ ಸಮಯ ತೆಗೆದುಕೊಳ್ಳುತ್ತಿದೆ. ಚಿತ್ರ ಚೆನ್ನಾಗಿ ಬರುತ್ತಿದೆ. ‘ದೇವರು ಋಜು ಮಾಡಿದನು’ ಒಂದು ಹಂತದ ಚಿತ್ರೀಕರಣ ಮುಗಿದಿದೆ. ‘ಮೋಡ ಕವಿದ ವಾತಾವರಣ’ ಚಿತ್ರೀಕರಣ ಮುಗಿದಿದೆ’ ಎಂದರು.
‘ಮೋಡ ಕವಿದ ವಾತಾವರಣ’ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮತ್ತು ಜೂಡಾ ಸ್ಯಾಂಡಿ ಸಂಗೀತವಿದೆ.

ಇದನ್ನೂ ಓದಿ:-
Interesting article! Understanding platform security is key, especially with growing online options like hm 88. Smart betting & a legit site are crucial. Check out hm 88 slot download for a smooth mobile experience & diverse games – strategy is everything!