ಬೇರೆ ಭಾಷೆ ಸಿನಿಮಾ ನೋಡ್ತೀರಾ, ಕನ್ನಡ ಸಿನಿಮಾ ಯಾಕೆ ನೋಡಲ್ಲ?: ಶಿವಣ್ಣ ಪ್ರಶ್ನೆ

‘ಬೇರೆ ಭಾಷೆ ಸಿನಿಮಾಗಳನ್ನೆಲ್ಲಾ ನೋಡುತ್ತಾರೆ. ನಮ್ಮ ಭಾಷೆಯ ಚಿತ್ರಗಳನ್ನು ಯಾಕೆ ನೋಡುವುದಿಲ್ಲ. ಇಲ್ಲೂ ಅದ್ಭುತವಾದ ತಂತ್ರಜ್ಞರು ಇದ್ದಾರೆ. ಅವರೆಲ್ಲರೂ ಬೆಳೆಯಬೇಕು ಎಂದರೆ, ನಿಮ್ಮೆಲ್ಲರ ಪ್ರೋತ್ಸಾಹ ಬೇಕು’ ಎಂದು ಶಿವರಾಜಕುಮಾರ್ (Shiva Rajkumar) ಹೇಳಿದ್ದಾರೆ.
ಶಿವರಾಜಕುಮಾರ್ ಹೀಗೆ ಮಾತನಾಡಿದ್ದು ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಚಿತ್ರದ ಪ್ರೀ-ರಿಲೀಸ್ ಇವೆಂಟ್‍ನಲ್ಲಿ. ಈ ಚಿತ್ರವು ಜೂನ್ 06ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಭಾನುವಾರ, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಚಿತ್ರದ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಚಿತ್ರವನ್ನು ನೋಡಿ ಎಂದು ಶಿವಣ್ಣ ಮನವಿ ಮಾಡಿದ್ದರು. ಕಳೆದ ವಾರವೂ ಅವರು ಸಮಾರಂಭವೊಂದರಲ್ಲಿ ಇದೇ ಅರ್ಥದ ಮಾತಾಡಿದ್ದರು. ಬರೀ ಸ್ಟಾರ್ ಚಿತ್ರಗಳಿಗೆ ಮಾತ್ರ ಪ್ರೋತ್ಸಾಹ ಕೊಡೋದಷ್ಟೇ ಅಲ್ಲ. ಹೊಸಬರಿಗೂ ಪ್ರೋತ್ಸಾಹ ಕೊಡಬೇಕು. ಹೊಸಬರಿಗೆ ಪ್ರೋತ್ಸಾಹ ಮಾಡದಿದ್ದರೆ, ಕನ್ನಡ ಹೇಗೆ ಬೆಳೆಯುತ್ತದೆ?’ ಎಂದು ಪ್ರಶ್ನಿಸಿದ್ದರು. ಈಗ ಆ ಬಗ್ಗೆ ಇನ್ನಷ್ಟು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀನಗರ ಕಿಟ್ಟಿ, ನಾಗಶೇಖರ್, ಎಸ್. ಮಹೇಂದರ್ ಮುಂತಾದವರಿದ್ದರು.

ಚಿತ್ರದ ಕುರಿತು ಮಾತನಾಡಿರುವ ಅವರು, ‘ಈ ಸಿನಿಮಾ ಗೆದ್ದರೆ ನಿರ್ಮಾಪಕರು ಇನ್ನಷ್ಟು ಸಿನಿಮಾಗಳನ್ನು ಮಾಡುತ್ತಾರೆ. ಕಲಾವಿದರು ಇನ್ನಷ್ಟು ಚಿತ್ರಗಳಲ್ಲಿ ನಟಿಸುತ್ತಾರೆ. ಈ ಚಿತ್ರಕ್ಕೆ ವಿಶೇಷ ರಿಯಾಯ್ತಿ ಕೊಡಿ. ದಯವಿಟ್ಟು ಈ ಚಿತ್ರವನ್ನು ಗೆಲ್ಲಿಸಿ. ನಾನು ಬಹಳ ಹಿಂದಿನಿಂದಲೂ ಇದೇ ಮಾತುಗಳನ್ನು ಹೇಳುತ್ತಿದ್ದೇನೆ. ಕನ್ನಡ ಚಿತ್ರಗಳನ್ನು ನೋಡಿ. ಹೊಸ ಚಿತ್ರಗಳು ಬರಬೇಕು. ಹೊಸ ಅಲೆ ಬರಬೇಕು. ಅಪ್ಪಾಜಿ ಯಾವಾಗಲೂ ಅಭಿಮಾನಿ ದೇವರುಗಳು ಎನ್ನುತ್ತಿದ್ದರು. ಆ ದೇವರು ಎನ್ನುವ ಸ್ಥಾನಕ್ಕೆ ಯೋಗ್ಯತೆ ಕೊಡಿ. ಸಿನಿಮಾ ನೋಡಿ, ಆಶೀರ್ವಾದ ಮಾಡಿ’ ಎಂದರು.
ಒಂದು ಸಿನಿಮಾ ಒಂದು ಬಾರಿ ಬಿಡುಗಡೆ ಮಾಡುವುದೇ ಕಷ್ಟ ಎಂದ ಶಿವಣ್ಣ, ‘ಒಮ್ಮೆ ಬಿಡುಗಡೆ ಮಾಡಿದ ಮೇಲೆ ಸಾಕಾಗಿ ಹೋಗಿರುತ್ತದೆ. ಹಾಗಿರುವಾಗ, ನಿರ್ಮಾಪಕರು ನಂಬಿಕೆ ಈ ಚಿತ್ರವನ್ನು ಮರುಬಿಡುಗಡೆ ಮಾಡುತ್ತಿದ್ದಾರೆ. ಅದಕ್ಕಾಗಿ ಈ ಚಿತ್ರವನ್ನು ನೋಡಬೇಕು. ಅವರಿಗೆ ಸಿನಿಮಾ ಮೇಲೆ ಬಹಳ ಪ್ರೀತಿ ಇದೆ. ನಂಬಿಕೆ ಇದೆ. ಅದು ನನಗೆ ಇಷ್ಟವಾಯಿತು. ನಾಗಶೇಖರ್ ಪ್ರತಿ ಚಿತ್ರದಲ್ಲೂ ವಿಶೇಷತೆ ಇದ್ದೇ ಇರುತ್ತದೆ. ಎಲ್ಲರಿಗೂ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲಿ’ ಎಂದು ಹಾರೈಸಿದರು.
ಪವಿತ್ರ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ರೇಶ್ಮೆ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಂಗಾಯಣ ರಘು, ಸಾಧುಕೋಕಿಲ, ತಬಲಾ ನಾಣಿ, ಸಂಪತ್, ರಾಗಿಣಿ, ಚೇತನ್ ಚಂದ್ರ ಮುಂತಾದವರು ನಟಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ಶ್ರೀಧರ್ ಸಂಭ್ರಮ್ ಸಂಗೀತ ಈ ಚಿತ್ರಕ್ಕಿದೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
It is a pity, that I can not participate in discussion now. I do not own the necessary information. But…
One thought on “ಬೇರೆ ಭಾಷೆ ಸಿನಿಮಾ ನೋಡ್ತೀರಾ, ಕನ್ನಡ ಸಿನಿಮಾ ಯಾಕೆ ನೋಡಲ್ಲ?: ಶಿವಣ್ಣ ಪ್ರಶ್ನೆ”