Firefly; ಅಲ್ಲಿ ಶಿವ ಪುಟ್ಟಸ್ವಾಮಿ; ಇಲ್ಲಿ ದಿ ಕಿಂಗ್; ‘ಫೈರ್ ಫ್ಲೈ’ನಲ್ಲಿ ಅತಿಥಿಯಾದ ಶಿವಣ್ಣ

Shiva rajkumar

ರವಿ ಬಸ್ರೂರು ನಿರ್ದೇಶನದ ‘ವೀರ ಚಂದ್ರಹಾಸ’ ಚಿತ್ರದಲ್ಲಿ ಶಿವರಾಜಕುಮಾರ್, ಸಿಂಗಾನಲ್ಲೂರು ಸಂಸ್ಥಾನದ ‘ನಾಡಚಕ್ರವರ್ತಿ ಶಿವ ಪುಟ್ಟಸ್ವಾಮಿ’ಯಾಗಿ ಕಾಣಿಸಿಕೊಳ್ಳುತ್ತಿರುವ ವಿಷಯ ಗೊತ್ತೇ ಇದೆ. ಮುಂದಿನ ವಾರ ಶಿವರಾಜಕುಮಾರ್‌ ಅಭಿನಯದ ಇನ್ನೊಂದು ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ಅದ್ಯಾವುದು ಎಂಬ ಪ್ರಶ್ನೆ ಬಂದರೆ, ಇಲ್ಲಿದೆ ಉತ್ತರ. ಶಿವರಾಜಕುಮಾರ್ ಮಗಳು ನಿವೇದಿತಾ ಶಿವರಾಜಕುಮಾರ್‌, ‘ಫೈರ್ ಫ್ಲೈ’ (firefly) ಎಂಬ ಚಿತ್ರವನ್ನು ಶ್ರೀ ಮುತ್ತು ಸಿನಿ ಸರ್ವೀಸಸ್‍ ಸಂಸ್ಥೆಯಡಿ ನಿರ್ಮಿಸಿದ್ದಾರೆ. ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ಶಿವರಾಜಕುಮಾರ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶಿವರಾಜಕುಮಾರ್‌ ಈ ಚಿತ್ರದಲ್ಲಿ ‘ದಿ ಕಿಂಗ್‍’ ಪಿಜ್ಜಾ ಡೆಲಿವರಿ ಮ್ಯಾನ್‍ ಆಗಿ ಕಾಣಿಸಿಕೊಂಡಿದ್ದು, ಕೈಯಲ್ಲಿ ಪಿಜ್ಜಾ ಬಾಕ್ಸ್ ಹಿಡಿದು ಸ್ಟೈಲಿಶ್‍ ಆಗಿ ಎಂಟ್ರಿ ಕೊಡುತ್ತಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ಈ ಕಥೆ ವಿಭಿನ್ನವಾಗಿದೆ. ಕೇಳಿದ ತಕ್ಷಣ ಇಷ್ಟವಾಯಿತು. ಸಾಕಷ್ಟು ವಿಷಯಗಳು ಚಿತ್ರದಲ್ಲಿವೆ. ಇದೊಂದು ಮೌಲ್ಯಗಳಿರುವ ಸಿನಿಮಾ. ಈ ಚಿತ್ರಕ್ಕೆ ಒಂದೊಳ್ಳೆಯ ತಂಡ ಕೆಲಸ ಮಾಡಿದೆ. ಕನ್ನಡದಲ್ಲಿ ಇನ್ನಷ್ಟು ಹೊಸ ತಂಡಗಳು ಬರಬೇಕು. ಅವರೇ ನಮ್ಮ ಭಾಷೆ, ಸಂಸ್ಕೃತಿಯನ್ನು ಮುನ್ನಡೆಸಬೇಕು. ಸಿನಿಮಾ ಎಷ್ಟು ದುಡ್ಡು ಮಾಡುತ್ತದೆ ಎಂಬುದು ನಂತರದ ಮಾತು. ಆದರೆ, ನಮ್ಮ ಪ್ರಯತ್ನ ಇರಬೇಕು. ಈ ಚಿತ್ರದಲ್ಲಿ ಹೊಸ ಹುಡುಗರು ನನ್ನನ್ನು ಇನ್ನಷ್ಟು ಯಂಗ್‌ ಆಗಿ ತೋರಿಸಿದ್ದಾರೆ’ ಎಂದಿದ್ದಾರೆ.

‘ಫೈರ್ಫೈ’ ಚಿತ್ರವನ್ನು ವಂಶಿ ನಿರ್ದೇಶಿಸುವುದರ ಜೊತೆಗೆ, ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಲ್ಲತ್ತಿ  ಛಾಯಾಗ್ರಹಣ,  ಚರಣ್ ರಾಜ್ ಸಂಗೀತ ನಿರ್ದೇಶನ ಹಾಗೂ ರಘು ನಿಡುವಳ್ಳಿ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ.

ವಂಶಿ ಜೊತೆಗೆ ರಚನಾ ಇಂದರ್‌, ಸುಧಾರಾಣಿ. ಅಚ್ಯುತ್‍ ಕುಮಾರ್‌, ಶೀತಲ್‍ ಶೆಟ್ಟಿ, ಮೂಗು ಸುರೇಶ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:-


  1. с искреннем уважением к вам! https://kemono.im/weoygnedueo/geroin-po-nizkoi-tsene-kupit сказали отпрака на следующий день после платежа!

  2. Всем РґРѕР±СЂРѕРіРѕ времени суток. Р’РѕРїСЂРѕСЃ такой – РљРѕ скольки лучше делать РњРќ Рё как быстро растет толер??? https://linkin.bio/walterguzmanwal Всем привет!

2 thoughts on “Firefly; ಅಲ್ಲಿ ಶಿವ ಪುಟ್ಟಸ್ವಾಮಿ; ಇಲ್ಲಿ ದಿ ಕಿಂಗ್; ‘ಫೈರ್ ಫ್ಲೈ’ನಲ್ಲಿ ಅತಿಥಿಯಾದ ಶಿವಣ್ಣ

Leave a Reply

Your email address will not be published. Required fields are marked *