20 ನಿಮಿಷ ಹೊಸ ದೃಶ್ಯಗಳೊಂದಿಗೆ ‘Sanju Weds Geetha 2’ ಮತ್ತೆ ಮರುಬಿಡುಗಡೆ

2002ರಲ್ಲಿ ರವಿಚಂದ್ರನ್ ಅಭಿನಯದ ಮತ್ತು ನಿರ್ದೇಶನದ ‘Ekangi’ ಬಿಡುಗಡೆಯಾದಾಗ, ಚಿತ್ರ ಜಾಳುಜಾಳಾಗಿದೆ ಎಂಬ ಕಾರಣಕ್ಕೆ ಪ್ರೇಕ್ಷಕರು ತಿರಸ್ಕರಿಸಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ರವಿಚಂದ್ರನ್ ಒಂದಿಷ್ಟು ದೃಶ್ಯಗಳ ಚಿತ್ರೀಕರಣ ಮಾಡಿ, ಚಿತ್ರಕ್ಕೆ ಹೊಸದಾಗಿ ಸೇರಿಸಿ, ಮರುಬಿಡುಗಡೆ ಮಾಡಿದ್ದರು. ಇದರಿಂದ ಚಿತ್ರಕ್ಕೆ ಹೆಚ್ಚಿನ ಪ್ರಯೋಜನವೇನೂ ಆಗಿರಲಿಲ್ಲ.
ಈಗ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ವಿಷಯದಲ್ಲೂ ಇದು ಮುಂದುವರೆದಿದೆ. ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ 17ರಂದು ಬಿಡುಗಡೆಯಾಗಿತ್ತು. ಚಿತ್ರಕಥೆ, ನಿರೂಪಣೆ ಬಗ್ಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಾಕಷ್ಟು ಟೀಕೆಗಳು ವ್ಯಕವಾಗಿದ್ದವು. ಹಾಗಾಗಿ, ಮರುವಾರವೇ ಚಿತ್ರವನ್ನು ಚಿತ್ರಮಂದಿರಗಳಿಂದ ಹಿಂಪಡೆದಿದ್ದ ನಿರ್ದೇಶಕ ನಾಗಶೇಖರ್, ಚಿತ್ರವನ್ನು ಮತ್ತೊಮ್ಮೆ ಎಡಿಟ್ ಮಾಡಿ, ಮತ್ತೊಮ್ಮೆ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಹೇಳಿದ್ದರು. ಇದೀಗ ಚಿತ್ರವು ಜೂನ್ 06ರರಂದು ಮರುಬಿಡುಗಡೆಯಾಗಲಿದೆ.
ವಿಶೇಷವೆಂದರೆ, ಈ ಬಾರಿ 20 ನಿಮಿಷಗಳಷ್ಟು ಹೊಸ ದೃಶ್ಯಗಳನ್ನು ಸೇರಿಸಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಚಿತ್ರದ ಬಹಳ ಮುಖ್ಯವಾದ 20 ನಿಮಿಷಗಳಷ್ಟು ಹೊಸ ದೃಶ್ಯಗಳನ್ನು ಸೇರಿಸಿ, ಚಿತ್ರ ಮರುಬಿಡುಗಡೆ ಮಾಡುತ್ತಿದೆ. ಮೊದಲು ಚಿತ್ರದ ಅವಧಿ ಎರಡು ತಾಸು 02 ನಿಮಿಷಗಳಷಷ್ಟಿತ್ತು. ಈಗ ಚಿತ್ರದ ಅವಧಿ ಎರಡು ತಾಸು 23 ನಿಮಿಷಗಳಾಷ್ಟಗಲಿದೆಯಂತೆ.
‘ಸಂಜು ವೆಡ್ಸ್ ಗೀತಾ 2’ ಚಿತ್ರವನ್ನು ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ರಾಗಿಣಿ, ಚೇತನ್ ಚಂದ್ರ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಹೊಸ ಅವತರಣಿಕೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದು, ಚಿತ್ರ ಬಿಡುಗಡೆ ಆದ ಮೇಲೆ ನೋಡಬೇಕಿದೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] Jungle Mangal; ಅರಣ್ಯದಲ್ಲಿ ಬಂಧಿಯಾದ Yash Shetty […]
[…] […]
[…] […]
[…] Ramayana Rocking Star Yash ಫಸ್ಟ್ ಲುಕ್ […]
[…] Ramayana Rocking Star Yash ಫಸ್ಟ್ ಲುಕ್ […]
2 thoughts on “20 ನಿಮಿಷ ಹೊಸ ದೃಶ್ಯಗಳೊಂದಿಗೆ ‘Sanju Weds Geetha 2’ ಮತ್ತೆ ಮರುಬಿಡುಗಡೆ”