Sanjana Anand; ನನ್ನ, ಚಂದನ್‍ ನಡುವೆ ಏನಿಲ್ಲ: ಸಂಜನಾ ಆನಂದ್‍ ಸ್ಪಷ್ಟನೆ

ಚಂದನ್‍ ಶೆಟ್ಟಿ (Chandan Shetty) ಅಭಿನಯದ ‘ಸೂತ್ರಧಾರಿ’ ಚಿತ್ರವು ಮೇ 09ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲಿ ‘ಡ್ಯಾಶ್‍’ ಎಂಬ ಜನಪ್ರಿಯ ಹಾಡಿದ್ದು, ಈ ಹಾಡಿನಲ್ಲಿ ಚಂದನ್‍ ಮತ್ತು ಸಂಜನಾ ಆನಂದ್‍ (Sanjana Anand) ಜೊತೆಯಾಗಿ ಕಾಣಿಸಿಕೊಂಡಿದ್ದರು. ಯಾವಾಗ ಈ ಚಿತ್ರದ ಹಾಡು ಮತ್ತು ಫೋಟೋಗಳು ವೈರಲ್‍ ಆಯಿತೋ, ಆಗ ಚಂದನ್‍ ಮತ್ತು ಸಂಜನಾ ಮದುವೆಯಾಗುತ್ತಿದ್ದಾರೆ, ಅವರಿಬ್ಬರ ನಿಶ್ಚಿತಾರ್ಥವೂ ಆಗಿದೆ ಎಂಬ ಸುದ್ದಿಗಳು ಸೋಷಿಯಲ್‍ ಮೀಡಿಯಾದಲ್ಲಿ ಕೇಳಿಬಂದವರು.

ಆದರೆ, ಅವೆಲ್ಲವೂ ಸುಳ್ಳು ಎಂದು ಚಂದನ್‍ ಮತ್ತು ಸಂಜನಾ ಇಬ್ಬರೂ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ನಡೆದ ‘ಸೂತ್ರಧಾರಿ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಚಂದನ್‍ ಮತ್ತು ಸಂಜನಾ, ತಮ್ಮ ನಡುವೆ ಏನಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸಂಜನಾ, ‘ನಾನು ಮತ್ತು ಚಂದನ್‍ ಎಂಗೇಜ್‍ ಆಗುತ್ತಿದ್ದೇವೆ ಎಂದು ಕೆಲವು ದಿನಗಳಿಂದ ಗಾಳಿಸುದ್ದಿಗಳು ಕೇಳಿಬರುತ್ತಿವೆ. ನನ್ನ ಮತ್ತು ಅವರ ನಡುವೆ ಏನೂ ಇಲ್ಲ. ಅವೆಲ್ಲವೂ ಸುಳ್ಳು. ಎರಡು ವರ್ಷದ ಹಿಂದೆ ಚಿತ್ರೀಕರಣದಲ್ಲಿ ಅವರೊಟ್ಟಿಗೆ ಕೆಲಸ ಮಾಡಿದ್ದು ಬಿಟ್ಟರೆ, ಅವರನ್ನು ಭೇಟಿ ಮಾಡುತ್ತಿರುವುದು ಇದು ಮೂರನೆಯ ಸಲ. ಈ ತರಹದ ಸುದ್ದಿಗಳು ಎಲ್ಲಿಂದ ಶುರುವಾಗುತ್ತವೆ ಎಂದು ಗೊತ್ತಾಗುವುದಿಲ್ಲ. ಈ ಸುದ್ದಿ ಕೇಳಿ ನಗು ಬಂತು. ಕೆಲವರು ತಮ್ಮನ್ನು ಎಂಗೇಜ್‍ಮೆಂಟ್‍ಗೆ ಕರೆಯಲಿಲ್ಲ ಎಂದು ಫೋನ್‍ ಮಾಡಿದ್ದರು. ಆಗ ಸುದ್ದಿ ಇಷ್ಟೊಂದು ದೊಡ್ಡದಾಗಿದೆ ಎಂದನಿಸಿತು. ಹಾಗಾಗಿ, ಈ ಬಗ್ಗೆ ಸ್ಪಷ್ಟೀಕರಣ ಕೊಡಬೇಕು ಎಂದನಿಸಿ ಈ ವಿಷಯ ಮಾತಾಡುತ್ತಿದ್ದೇನೆ’ ಎಂದರು.

‘ಸೂತ್ರಧಾರಿ’ ಚಿತ್ರಕ್ಕೆ ಕಿರಣ್ ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ನವರಸನ್‍ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಚಂದನ್‍ ಶೆಟ್ಟಿ, ಸಂಜನಾ ಆನಂದ್‍, ಅಪೂರ್ವ, ಪ್ರಶಾಂತ್ ನಟನ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಪಿ.ಕೆ.ಎಚ್‍. ದಾಸ್ ಛಾಯಾಗ್ರಹಣವಿದೆ.

  • Preethi Prema Panganama; ಪ್ರೀತಿ, ಪ್ರೇಮ ಮಾಡಿ ಪಂಗನಾಮ ಹಾಕಲು ಹೊರಟವರ ಕಥೆ ಇದು …

    Preethi Prema Panganama; ಪ್ರೀತಿ, ಪ್ರೇಮ ಮಾಡಿ ಪಂಗನಾಮ ಹಾಕಲು ಹೊರಟವರ ಕಥೆ ಇದು …

    ಕೆಲವು ವರ್ಷಗಳ ಹಿಂದೆ ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ಜನಪ್ರಿಯ ಕಾರ್ಯಕ್ರಮವೆಂದರೆ ಅದು ‘ಹಾಸ್ಯ ಲಾಸ್ಯ’. ಮುತ್ತುರಾಜ್‍ ಮತ್ತು ಶ್ರೀಕಂಠ ಜೋಡಿಯ ಈ ಕಾರ್ಯಕ್ರಮ ಸಾಕಷ್ಟು ಯಶಸ್ವಿಯಾಗಿತ್ತು. ಈಗ ಈ ಜೋಡಿ, ಹೊಸ ಚಿತ್ರವೊಂದರ ಮೂಲಕ ವಾಪಸ್ಸಾಗಿದ್ದಾರೆ. ಸಿನಿಮಾ ಮಾಡಬೇಕು ಎನ್ನುವುದು ಮುತ್ತುರಾಜ್‍ ಮತ್ತು ಶ್ರೀಕಂಠ ಅವರ ಬಹುವರ್ಷಗಳ ಕನಸಾಗಿತ್ತಂತೆ. ಅದು ಈಗ ‘ಪ್ರೀತಿ ಪ್ರೇಮ ಪಂಗನಾಮ’ (Preethi Prema Panganama) ಎಂಬ ಹೊಸ ಚಿತ್ರದ ಮೂಲಕ ಈಡೇರಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಶ್ರೀಕಂಠ…

  • Puppy; ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಮೇ1ಕ್ಕೆ ಬಿಡುಗಡೆ

    Puppy; ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಮೇ1ಕ್ಕೆ ಬಿಡುಗಡೆ

    ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಶ್ವಾನದ ಸುತ್ತ ಸುತ್ತವ ‘777 ಚಾರ್ಲಿ’ ಮತ್ತು ‘ನಾನು ಮತ್ತು ಗುಂಡ’ ಚಿತ್ರಗಳು ಬಿಡುಗಡೆಯಾಗಿವೆ. ಸದ್ಯದಲ್ಲೇ ‘ನಾನು ಮತ್ತು ಗುಂಡ 2’ ಚಿತ್ರಗಳು ಬಿಡುಗಡೆಯಾಗಬೇಕಿದೆ. ಹೀಗಿರುವಾಗಲೇ ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ‘ಪಪ್ಪಿ’ ಎಂಬ ಇನ್ನೊಂದು ಚಿತ್ರ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಒಂದಿಷ್ಟು ಹೊಸಬರು ಸೇರಿಕೊಂಡು ಉತ್ತರ ಕರ್ನಾಟದ ಜವಾರಿ ಭಾಷೆಯಲ್ಲೊಂದು ‘ಪಪ್ಪಿ’ (Puppy) ಎಂಬ ಸಿನಿಮಾ ಮಾಡಿದ್ದು, ಈ ಟ್ರೇಲರ್‌ ಈಗಾಗಲೇ ಬಿಡುಗಡೆ ಆಗಿದೆ. ಈ ಚಿತ್ರ್ಕೆಕ್ಕೆ ಇದೀಗ…

  • Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್‍ ಅವರನ್ನು ನೆನಪಿಸಿದ ಯುವ ರಾಜಕುಮಾರ್

    Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್‍ ಅವರನ್ನು ನೆನಪಿಸಿದ ಯುವ ರಾಜಕುಮಾರ್

    ಪುನೀತ್‍ ರಾಜಕುಮಾರ್‌ ಅಭಿನಯದ ‘ಜಾಕಿ’ ಚಿತ್ರದಲ್ಲಿನ ಒಂದು ದೃಶ್ಯ ನೆನಪಿರಬಹುದು. ಚಿತ್ರದ ನಾಯಕ ಒಬ್ಬ ಸೈಕೋನನ್ನು ಹಿಡಿಯುವುದಕ್ಕೆ ಮಾನಸಿಕ ಅಸ್ವಸ್ಥನ ತರಹ ಆಡಿ, ಹೊಡೆದಾಡಿ ಸೆರೆಹಿಡಿಯುತ್ತಾನೆ. ವಿಷಲ್‍ ಊದುತ್ತಾ, ತಲೆಗೆ ಒಂದು ಟೋಪಿ ಧರಿಸಿ, ಒಡೆದ ಕನ್ನಡಕವನ್ನು ತೊಟ್ಟು ಪುನೀತ್‍ ವಿಭಿನ್ನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದರು. ಈಗ ಆ ದೃಶ್ಯವನ್ನು ಯುವ ರಾಜಕುಮಾರ್‌ (Yuva Rajkumar), ತಮ್ಮ ಹೊಸ ಚಿತ್ರ ‘ಎಕ್ಕ’ (Ekka) ದಲ್ಲಿ ಮತ್ತೊಮ್ಮೆ ನೆನಪಿಸಿದ್ದಾರೆ. ‘ಎಕ್ಕ’ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಅದರಲ್ಲಿ ಯುವ ಸಹ ಅದೇ ತರಹ…



(Sanjana Anand also addressed the rumors by saying she is not dating Chandan Shetty and asked people to stop spreading false information. Rumors surfaced suggesting Chandan Shetty was preparing to marry Sanjana Anand after his divorce from Niveditha Gowda, but Chandan Shetty has addressed these rumors as false, asking people to stop spreading misinformation.)

One thought on “Sanjana Anand; ನನ್ನ, ಚಂದನ್‍ ನಡುವೆ ಏನಿಲ್ಲ: ಸಂಜನಾ ಆನಂದ್‍ ಸ್ಪಷ್ಟನೆ

Leave a Reply

Your email address will not be published. Required fields are marked *