ಹಾರರ್ ಚಿತ್ರದಲ್ಲಿ Sangeetha Sringeri; ನಿಶ್ಚಿತ್‍ಗೆ ನಾಯಕಿ

sangeetha sringeri

ಬಿಗ್‍ ಬಾಸ್‍’ (BIGG BOSS)ಗೆ ಹೋಗಿ ಬಂದರೂ, ಅಲ್ಲಿ ಸಾಕಷ್ಟು ಮಿಂಚಿದರೂ ಸಂಗೀತಾ ಶೃಂಗೇರಿ (Sangeetha Sringeri) ಗೆ ಕನ್ನಡ ಚಿತ್ರರಂಗದಲ್ಲಿ ಮಾತ್ರ ಯಾಕೋ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ಕಳೆದ ವರ್ಷ ಬಿಡುಗಡೆಯಾದ ‘ಮಾರಿಗೋಲ್ಡ್’ ಚಿತ್ರ ಬಿಟ್ಟರೆ, ಸಂಗೀತ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿಲ್ಲ. ಆಕೆ ಹೊಸ ಚಿತ್ರ ಒಪ್ಪಿಕೊಂಡ ಸುದ್ದಿಯಾಗಲಿಲ್ಲ. ‘ಮಾರಿಗೋಲ್ಡ್’ ಚಿತ್ರ ಸಹ ಕೆಲವು ವರ್ಷಗಳ ಹಿಂದೆ ಶುರುವಾಗಿದ್ದು. ಅದು ತಡವಾಗಿ ಕಳೆದ ವರ್ಷ ಬಿಡುಗಡೆಯಾಗಿತ್ತು.

ಈಗ್ಯಾಕೆ ಈ ವಿಷಯವೆಂದರೆ, ಸಂಗೀತಾ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿರುವ ಸುದ್ದಿಯೊಂದು ಬಂದಿದೆ.  ಇದೊಂದು ಹಾರರ್, ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ನಿಶ್ಚಿತ್‍ ಕೊರೋಡಿ ನಾಯಕನಾಗಿ ಅಭಿನಯಿಸುತ್ತಿದ್ದಾರಂತೆ. ನಿಶ್ಚಿತ್‍ ಇದಕ್ಕೂ ಮುನ್ನ ‘ಸಪ್ಲೈಯರ್ ಶಂಕರ’, ‘ಟಾಮ್‍ ಆ್ಯಂಡ್‍ ಜೆರ್ರಿ’ ಮತ್ತು ‘ಗಂಟುಮೂಟೆ’ ಚಿತ್ರಗಳಲ್ಲಿ ನಟಿಸಿದ್ದರು. ಕಳೆದ ವರ್ಷ ಬಿಡುಗಡೆಯಾದ ‘ಸಪ್ಲೈಯರ್ ಶಂಕರ್ ಚಿತ್ರದ ಮೂಲಕ ನಿಶ್ಚಿತ್‍ ಸಹ ಇದೀಗ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.

ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸಂಗೀತಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಜಗನ್‍ ಅಲೋಷಿಯಸ್‍ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಎಸ್‍.ವಿ. ನಾರಾಯಣ ಈ ಚಿತ್ರದ ನಿರ್ಮಾಪಕರು.

ಇನ್ನೂ ಹೆಸರಿಡದ ಈ ಚಿತ್ರ ಬರೀ ಕನ್ನಡದಲ್ಲಷ್ಟೇ ಅಲ್ಲ, ತಮಿಳಿನಲ್ಲೂ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಈಗಾಗಲೇ ಚಿತ್ರದ ಪ್ರೀ-ಪ್ರೊಡಕ್ಷನ್‍ ಕೆಲಸಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. 50 ದಿನಗಳ ಒಂದೇ ಹಂತದಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.


ಇದನ್ನೂ ಓದಿ :-


ಹೆಚ್ಚಿನ ಓದಿಗಾಗಿ :-


ಒಮ್ಮೆ ಭೇಟಿ ನೀಡಿ :-

One thought on “ಹಾರರ್ ಚಿತ್ರದಲ್ಲಿ Sangeetha Sringeri; ನಿಶ್ಚಿತ್‍ಗೆ ನಾಯಕಿ

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!