Mangalapuram Movie: ನಂಬಿಕೆ, ಮೂಢನಂಬಿಕೆಗಳ ಸುತ್ತ ರಿಷಿ ಅಭಿನಯ

‘ರುದ್ರ ಗರುಡ ಪುರಾಣ’ ಚಿತ್ರದ ನಂತರ ರಿಷಿ ಸುದ್ದಿಯೇ ಇರಲಿಲ್ಲ. ಈ ಮಧ್ಯೆ, ಅವರೊಂದು ಹೊಸ ಚಿತ್ರ ಒಪ್ಪಿಕೊಮಡಿದ್ದಾರೆ ಎಂಬ ವಿಷಯ ಕೇಳಿಬಂದಿತ್ತಾದರೂ, ಆ ಬಗ್ಗೆ ಅವರಾಗಲೀ, ಚಿತ್ರತಂಡದವರಾಗಲೀ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಈಗ ರಿಷಿ ಅಭಿನಯದ ಹೊಸ ಚಿತ್ರದ ಮಾಹಿತಿ ಕೊನೆಗೂ ಹೊರಬಿದ್ದಿದ್ದು, ಚಿತ್ರಕ್ಕೆ ‘ಮಂಗಳಾಪುರಂ’ (Mangalapuram) ಎಂದು ಹೆಸರಿಡಲಾಗಿದೆ.
ಈ ಹಿಂದೆ ತುಳು ಚಿತ್ರರಂಗದಲ್ಲಿ ‘ಉಮಿಲ್’(Umil) ಹಾಗೂ ‘ದೊಂಬರಾಟ’(Dombarata) ಚಿತ್ರಗಳನ್ನು ನಿರ್ದೇಶಿಸಿರುವ ರಂಜಿತ್ ರಾಜ್ ಸುವರ್ಣ (Ranjith Raj Suvarna), ರಿಷಿ ನಟನೆಯ ಹೊಸ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಶೇಷವೆಂದರೆ, ರಿಷಿ ಜೊತೆಯಲ್ಲಿ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಸಹ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಮಂಗಳಾಪುರಂ’ ಒಂದು ಮರ್ಡರ್ ಮಿಸ್ಟ್ರಿಯಾಗಿದ್ದು, ನಂಬಿಕೆ – ಮೂಡನಂಬಿಕೆ, ಕೈವಾಡ ಹಾಗೂ ಪವಾಡಗಳ ಸುತ್ತ ಕಥೆ ಸಾಗಲಿದೆ. ಈ ಚಿತ್ರವನ್ನು ಪ್ರಸನ್ನ ತಂತ್ರಿ ಮೂಡಬಿದ್ರೆ ಹಾಗೂ ರಾಮ್ ಪ್ರಸಾದ್ ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಕಾಲಿಡುತ್ತಿದ್ದಾರೆ.
ಸದ್ಯ ಚಿತ್ರದ ಮೊದಲ ನೋಟ ಮಾತ್ರ ಬಿಡುಗಡೆಯಾಗಿದೆ. ಇನ್ನು, ಚಿತ್ರೀಕರಣವೇನಿದ್ದರೂ ಜೂನ್ ತಿಂಗಳಿನಿಂದ ಪ್ರಾರಂಭವಾಗಲಿದೆಯಂತೆ. ಬೆಂಗಳೂರು ಅಲ್ಲದೆ ಕಾರ್ಕಳ, ತೀರ್ಥಹಳ್ಳಿ, ಮಡಿಕೆರಿ ಮುಂತತಾದ ಕಡೆ ಚಿತ್ರೀಕರಣ ನಡೆಯಲಿದೆ. ಅನೂಪ್ ಸಿಳೀನ್ ಸಂಗೀತ ಮತ್ತು ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ.
‘ಮಂಗಳಾಪುರಂ’ಗೆ ನಾಯಕಿ ಯಾರು? ಬೇರೆ ಯಾರೆಲ್ಲಾ ಕೆಲಸ ಮಾಡುತ್ತಾರೆ? ಎಂಬ ಪ್ರಶ್ನೆಗಳು ಸಹಜ. ಸದ್ಯಕ್ಕೆ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಸಂಪೂರ್ಣ ಕಲಾವಿದರ ಮತ್ತು ತಂತ್ರಜ್ಞರ ತಂಡದ ಬಗ್ಗೆ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ:-
One thought on “Mangalapuram Movie: ನಂಬಿಕೆ, ಮೂಢನಂಬಿಕೆಗಳ ಸುತ್ತ ರಿಷಿ ಅಭಿನಯ”